i
ಉತ್ತಮ ಆಡಳಿತ ಮಾಸದ ಕುರಿತು ಆನ್ ಲೈನ್ ಉಪನ್ಯಾಸ…
ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿಯು “ಉತ್ತಮ ಆಡಳಿತ ಮಾಸದ (Good Governance Month)” ಅಂಗವಾಗಿ 2022ರ ಡಿಸೆಂಬರ್ ಮಾಹೆಯಲ್ಲಿ ಆನ್ ಲೈನ್ ಉಪನ್ಯಾಸಗಳು, ತಜ್ಞ ಸಮಿತಿ ಚರ್ಚೆ ಹಾಗೂ ಪ್ರಬಂಧ ಸ್ಪರ್ಧೆಯನ್ನು ಹಮ್ಮಿಕೊಂಡಿದೆ.
ರಾಜ್ಯ ಮಟ್ಟದ ಪ್ರಬಂಧ ಸ್ಪರ್ಧೆಯನ್ನು ಕನ್ನಡ ಮತ್ತು ಇಂಗ್ಲೀಷ್ನಲ್ಲಿ ಪದವಿ ಮತ್ತು ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳಿಗೆ ಏರ್ಪಡಿಸಿದ್ದು,“Technology for Good Governance” “ಉತ್ತಮ ಆಡಳಿತಕ್ಕಾಗಿ ತಂತ್ರಜ್ಞಾನ” ವಿಷಯದ ಮೇಲೆ 500 ಪದಗಳಿಗೆ ಮೀರದಂತೆ ಬರೆದು ಕಳುಹಿಸಬಹುದಾಗಿದೆ.
ಆಸಕ್ತರು ತಮ್ಮ ಪ್ರಬಂಧವನ್ನು ಡಿಸೆಂಬರ್ 15ರೊಳಗಾಗಿ ಸಂಜೆ 5.00 ಗಂಟೆಯೊಳಗಾಗಿ essy.ksta@gmail.com ಇ-ಮೇಲ್ ಮೂಲಕ ಕಳುಹಿಸುವಂತೆ ಅಧಿಕೃತ ಪ್ರಕಟಣೆ ತಿಳಿಸಿದೆ.