i
7ನೇ ವೇತನ ಆಯೋಗದ ಅಡಿ HRA ನಿಯಮಗಳ ಸಡಿಲಿಕೆ…
ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಕೇಂದ್ರ ಸರ್ಕಾರಿ ನೌಕರರಿಗೆ ಹಣಕಾಸು ಸಚಿವಾಲಯದ ವೆಚ್ಚಗಳ ಇಲಾಖೆ 7ನೇ ವೇತನ ಆಯೋಗದ ಅಡಿಯಲ್ಲಿ ಮನೆ ಬಾಡಿಗೆ ಭತ್ಯೆ(HRA) ನಿಯಮಗಳನ್ನು ಪರಿಷ್ಕರಿಸಿದೆ.
ಉದ್ಯೋಗಿಯ ವಾಸಸ್ಥಳ ಮತ್ತು ಕರ್ತವ್ಯದ ಸ್ಥಳ ಆಧಾರದಲ್ಲಿ ಮನೆ ಬಾಡಿಗೆ ಭತ್ಯೆ ನಿಯಮಾವಳಿಗಳ ಪ್ರಕಾರ ನೌಕರರಿಗೆ ಮನೆ ಬಾಡಿಗೆ ಭತ್ಯೆ ಅನುಮತಿ ನೀಡಲಾಗಿದೆ.
ಒಂದು ವೇಳೆ ಸರ್ಕಾರಿ ನೌಕರ ಅಪಾರ್ಟ್ಮೆಂಟ್ಗಳಲ್ಲಿ ತಮ್ಮ ಇನ್ನೊಬ್ಬ ಸರ್ಕಾರಿ ಉದ್ಯೋಗಿಯೊಂದಿಗೆ ವಾಸಿಸುತ್ತಿದ್ದರೆ ಅಂತಹ ನೌಕರನಿಗೆ ಈ ಎಚ್ಆರ್ಎ ಪರಿಷ್ಕರಣೆ ನಿಯಮ ಅನ್ವಯ ಆಗುವುದಿಲ್ಲ. ಯಾವ ನೌಕರರು ಕೇಂದ್ರ, ರಾಜ್ಯ, ಸ್ವಾಯತ್ತ ಸಾರ್ವಜನಿಕ ಸಂಸ್ಥೆ ಅಥವಾ ಪುರಸಭೆ, ಪೋರ್ಟ್ ಟ್ರಸ್ಟ್, ರಾಷ್ಟ್ರೀಕೃತ ಬ್ಯಾಂಕ್ಗಳು, ಭಾರತೀಯ ಜೀವ ವಿಮಾ ನಿಗಮ, ಇತ್ಯಾದಿಗಳಂತಹ ಅರೆ-ಸರ್ಕಾರಿ ಸಂಸ್ಥೆಯಿಂದ ಒದಗಿಸಲಾದ ವಸತಿಗಳಲ್ಲಿ ವಾಸಿಸುತ್ತಿದ್ದಾರೋ ಅಂತವರಿಗೆ ಇದು ಅನ್ವಯವಾಗುತ್ತದೆ ಎಂದು ಕೇಂದ್ರ ಸರ್ಕಾರದ ಹಣಕಾಸು ಇಲಾಖೆ ತಿಳಿಸಿದೆ.