i
ಮಹಿಳೆಯೊಂದಿಗೆ ಅಸಭ್ಯವಾಗಿ ವರ್ತಿಸಿ ಮೊಬೈಲ್ ಕದ್ದವನಿಗೆ ಧರ್ಮದೇಟು…
ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಸೀಟು ಆಟೋ ಒಂದರಲ್ಲಿ ತೆರಳುತ್ತಿದ್ದ ಸಂದರ್ಭದಲ್ಲಿ ಸಹ ಪ್ರಯಾಣಿಕರಾದ ಮಹಿಳೆಯೊಂದಿಗೆ ಆಟೋದಲ್ಲೇ ಅಸಭ್ಯವಾಗಿ ವರ್ತಿಸಿ ಮಹಿಳೆಯ ಮೊಬೈಲ್ ಕದ್ದವನಿಗೆ ನಡು ರಸ್ತೆಯಲ್ಲೇ ಸಂತ್ರಸ್ತ ಮಹಿಳೆ ಮತ್ತು ಯುವಕನಿಂದ ಧರ್ಮದೇಟು ನೀಡಲಾಗಿದೆ.
ಅಷ್ಟೇ ಅಲ್ಲ ಅಸಭ್ಯವಾಗಿ ವರ್ತಿಸಿದ ವ್ಯಕ್ತಿ(ಕಳ್ಳ)ಯನ್ನು ನಗರ ಪೊಲೀಸ್ ಠಾಣೆಗೆ ಸಾರ್ವಜನಿಕರೇ ಹಿಡಿದುಕೊಟ್ಟ ಪ್ರಸಂಗವು ನಗರದ ಮದಕರಿ ಸರ್ಕಲ್ ನಲ್ಲಿ ಸೋಮವಾರ ಮಧ್ಯಾಹ್ನ ನಡೆದಿದೆ.
ಮಹಿಳೆಯ ಮೊಬೈಲ್ ಕದ್ದು ಅಸಭ್ಯವಾಗಿ ವರ್ತಿಸಿದ್ದವನಿಗೆ ಹಿಗ್ಗಾಮುಗ್ಗಾ ಗೂಸ ನೀಡಲಾಯಿತು.
ಕಳ್ಳ ಕದ್ದ ಮೊಬೈಲ್ ಅನ್ನು ತನ್ನ ಜೇಬಿನಲ್ಲಿ ಇಟ್ಟುಕೊಂಡಿದ್ದನ್ನ ಸಾರ್ವಜನಿಕರ ಮಧ್ಯದಲ್ಲಿ ಮಹಿಳೆ ಮೊಬೈಲ್ ಪತ್ತೆ ಮಾಡಿ ಕಳ್ಳನಿಗೆ ಹಿಗ್ಗಾಮುಗ್ಗ ಥಳಿಸಿದ್ದಾಳೆ. ಚಿತ್ರದುರ್ಗ ನಗರ ಠಾಣೆ ವ್ಯಾಪ್ತಿಯಲ್ಲಿ ಘಟನೆ ಜರುಗಿದೆ.