i
ಹೊಸದುರ್ಗದ ಮಾಡದಕೆರೆಯಲ್ಲಿ 20 ಮಿ.ಮೀ ಮಳೆ…
ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಮೇ. 29 ರಂದು ಸುರಿದ ಮಳೆಯ ವಿವರದನ್ವಯ ಜಿಲ್ಲೆಯ ಹೊಸದುರ್ಗ ತಾಲ್ಲೂಕಿನ ಮಾಡದಕೆರೆಯಲ್ಲಿ 20 ಮಿ.ಮೀ ಮಳೆಯಾಗಿದೆ. ಇದು ಜಿಲ್ಲೆಯ ಅತ್ಯಧಿಕ ಮಳೆಯಾಗಿದೆ.
ಹೊಸದುರ್ಗ ತಾಲ್ಲೂಕಿನ ಹೊಸದುರ್ಗದಲ್ಲಿ 4.6 ಮಿ.ಮೀ ಮತ್ತೋಡು 2.1 ಮಿ.ಮೀ, ಬಾಗೂರು 3 ಮಿ.ಮೀ, ಶ್ರೀರಾಂಪುರ 3.2 ಮಿ.ಮೀ ಮಳೆಯಾಗಿದೆ.
ಚಿತ್ರದುರ್ಗ ತಾಲ್ಲೂಕಿನ ಚಿತ್ರದುರ್ಗ-1 ರಲ್ಲಿ 1.8 ಮಿ.ಮೀ, ಚಿತ್ರದುರ್ಗ –2 ರಲ್ಲಿ 7.6 ಮಿ.ಮೀ, ಭರಮಸಾಗರ 4.3 ಮಿ.ಮೀ, ಸಿರಿಗೆರೆ 9.2 ಮಿ.ಮೀ, ತುರುವನೂರು 17.6ಮಿ.ಮೀ, ಐನಹಳ್ಳಿ 12.8 ಮಿ.ಮೀ ಮಳೆಯಾಗಿದೆ.
ಮೊಳಕಾಲ್ಮೂರು ತಾಲ್ಲೂಕಿ ರಾಯಾಪುರ 4.1 ಮಿ.ಮೀ, ರಾಂಪುರ 11.1 ಮಿ.ಮೀ ಮಳೆಯಾಗಿದೆ. ಚಳ್ಳಕೆರೆ ತಾಲ್ಲೂಕಿನ ಚಳ್ಳಕೆರೆಯಲ್ಲಿ 4 ಮಿ.ಮೀ, ನಾಯಕನಹಟ್ಟಿ 9.2 ಮಿ.ಮೀ, ತಳುಕು 4.2 ಮಿ.ಮೀ ಮಳೆಯಾಗಿದೆ. ಹೊಳಲ್ಕೆರೆ ತಾಲ್ಲೂಕಿನಲ್ಲಿ 2.2 ಮಿ.ಮೀ, ತಾಳ್ಯದಲ್ಲಿ 3.2ಮಿ.ಮೀ ಮಳೆಯಾಗಿದೆ.
22 ಮನೆಗಳು ಭಾಗಶಃ ಹಾನಿ: ಸೋಮವಾರ ಸುರಿದ ಮಳೆಯಿಂದಾಗಿ ಜಿಲ್ಲೆಯಾದ್ಯಂತ ಒಟ್ಟು 22 ಮನೆಗಳು ಭಾಗಶಃ ಹಾನಿಯಾಗಿದ್ದು, ಒಟ್ಟು 14.5 ಹೆಕ್ಟೇರ್ ತೋಟಗಾರಿಕೆ ಬೆಳೆ ಹಾನಿಯಾಗಿದೆ.
ಚಿತ್ರದುರ್ಗ ತಾಲ್ಲೂಕಿನಲ್ಲಿ 3 ಮನೆ ಭಾಗಶಃ ಹಾನಿಯಾಗಿದ್ದು, 10 ಹೆಕ್ಟೇರ್ ತೋಟಗಾರಿಕೆ ಬೆಳೆಹಾನಿಯಾಗಿದೆ. ಹೊಸದುರ್ಗ ತಾಲ್ಲೂಕಿನಲ್ಲಿ 1 ಮನೆ ಭಾಗಶಃ ಹಾನಿಯಾಗಿದ್ದು, ಮೊಳಕಾಲ್ಮೂರು ತಾಲ್ಲೂಕಿನಲ್ಲಿ 1 ಮನೆ ಭಾಗಶಃ ಹಾನಿಯಾಗಿದೆ. ಹಿರಿಯೂರು ತಾಲ್ಲೂಕಿನಲ್ಲಿ 17 ಮನೆ ಭಾಗಶಃ ಹಾನಿಯಾಗಿದ್ದು, 4.5 ಹೆಕ್ಟೇರ್ ತೋಟಗಾರಿಕೆ ಬೆಳೆ ಹಾನಿಯಾಗಿದೆ ಎಂದು ಜಿಲ್ಲಾಧಿಕಾರಿ ಕಚೇರಿ ಪ್ರಕಟಣೆ ತಿಳಿಸಿದೆ.