i
ಹಿರಿಯೂರು ಸುತ್ತ ಮುತ್ತಲ ಪ್ರದೇಶಗಳಲ್ಲಿ ಭಾನುವಾರ ವಿದ್ಯುತ್ ವ್ಯತ್ಯಯ…
ಚಂದ್ರವಳ್ಳಿ ನ್ಯೂಸ್, ಹಿರಿಯೂರು:
ಹಿರಿಯೂರು ೬೬/೧೧ ಕೆ.ವಿ. ವಿದ್ಯುತ್ ಉಪ ಕೇಂದ್ರ ವ್ಯಾಪ್ತಿಯಲ್ಲಿ ಜೂನ್-4 ರಂದು ಭಾನುವಾರ ವಿದ್ಯುತ್ ವ್ಯತ್ಯಯ ಉಂಟಾಗಲಿದೆ.
ಹಿರಿಯೂರು ಹಳೇ ವಿದ್ಯುತ್ ಉಪ ಕೇಂದ್ರದಿಂದ ಹೊರಡುವ ಎಫ್-೯:ಹುಳಿಯಾರು ರಸ್ತೆ ೧೧ ಕೆವಿ ಪ್ರಸರರ್ಣ ಮಾರ್ಗದಲ್ಲಿ ವಿದ್ಯುತ್ ಕಂಬಗಳನ್ನು ಸ್ಥಳಾಂತರಿಸುವ ಕಾಮಗಾರಿ ಇರುವುದರಿಂದ ಜೂನ್-4 ರಂದು ಬೆಳಿಗ್ಗೆ 10 ಗಂಟೆಯಿಂದ ಸಂಜೆ 4 ಗಂಟೆವರೆಗೆ ವಿದ್ಯುತ್ ಸರಬರಾಜು ಇರುವುದಿಲ್ಲ. ಲಕ್ಕವ್ವನಹಳ್ಳಿ ರಸ್ತೆ, ಕುವೆಂಪುನಗರ, ಪುಷ್ಪಾಂಜಲಿ ಟಾಕೀಸ್, ಹರಿಶ್ಚಂದ್ರಘಾಟ್, ಸಾಯಿ ಗಾರ್ಡ್ನ್, ಸಿ.ಎಮ್.ಬಡಾವಣೆ, ಮೇರಿ ರಸ್ತೆ, ಮಸೀದಿ ರಸ್ತೆಯ ಸುತ್ತಾ ಮುತ್ತ ವ್ಯಾಪ್ತಿಯ ಗ್ರಾಹಕರು / ಸಾರ್ವಜನಿಕರು ಸಹಕರಿಸಬೇಕೆಂದು ಹಿರಿಯೂರು ಉಪವಿಭಾಗದ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಮನವಿ ಮಾಡಿದ್ದಾರೆ.