
ಎದೆ ಹಾಲಿನಷ್ಟೇ ಮಹತ್ವವುಳ್ಳದ್ದಾಗಿದೆ ಮಕ್ಕಳಿಗೆ ಹಾಕುವ ಲಸಿಕೆಗಳು… ಶಿಕ್ಷಣಾಧಿಕಾರಿ ಮಂಜುನಾಥ್…
ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಮಕ್ಕಳಿಗೆ ಲಸಿಕೆಗಳು ಎದೆ ಹಾಲಿನಷ್ಟೇ ಮಹತ್ವವುಳ್ಳದ್ದಾಗಿದೆ ತಾಲೂಕು ಆರೋಗ್ಯ ಶಿಕ್ಷಣಾಧಿಕಾರಿ ಎನ್ಎಸ್ ಮಂಜುನಾಥ್ ಹೇಳಿದರು.ನಗರದ ಜೆಜೆ ಹಟ್ಟಿ ಅಂಗನವಾಡಿ ಎ ಕೇಂದ್ರದಲ್ಲಿ ಪರಿಣಾಮಕಾರಿ ಮಿಷನ್ ಇಂದ್ರಧನುಷ್ ಲಸಿಕ ಅಭಿಯಾನದ ಮೂರನೇ ಸುತ್ತಿನ ನಾಲ್ಕನೇ ದಿನದ ಲಸಿಕ ಕಾರ್ಯಕ್ರಮದಲ್ಲಿ ಅವರು ಮಾತನಾಡಿ ನಿಮ್ಮ ಮಕ್ಕಳಿಗೆ ತಪ್ಪದೇ ಲಸಿಕೆ ಕೊಡಿಸಿ. 12 ಮಾರಕ ರೋಗಗಳಿಂದ ರಕ್ಷಣೆ ನೀಡಿ ಮಕ್ಕಳಿಗೆ ಲಸಿಕೆಗಳು ಎದೆ ಹಾಲಿನಷ್ಟೇ ಮಹತ್ವವುಳ್ಳದ್ದಾಗಿದೆ ಬಿಟ್ಟು ಹೋಗಿರುವ ಲಸಿಕ ದಿನಚರಿಯನ್ನು ಸರಿಪಡಿಸಿಕೊಳ್ಳಿ ಎಂದರು.
ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಬಿಮುಗಪ್ಪ ಮಾತನಾಡಿ ಅಂತರದ ಹೆರಿಗೆ ಕುಟುಂಬ ಯೋಜನೆಯನ್ನು ಅನುಸರಿಸಿಕೊಳ್ಳುವುದು ಕುಟುಂಬ ಯೋಜನೆಯಲ್ಲಿ ಪುರುಷರ ಸಹಭಾಗಿತ್ವ ಮಹತ್ವವಾಗಿರುತ್ತದೆ ಎಂದರು ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಶ್ರೀಧರ್ ಮಾತನಾಡಿ ಸ್ವಚ್ಛತೆ ಕಾಪಾಡಿ ಸಾಂಕ್ರಾಮಿಕ ರೋಗಗಳಾದ ಕರುಳು ಬೇನೆ ಅತಿಸಾರಬೇಡಿ ನಿರ್ಜಲೀಕರಣವಾಗದಂತೆ ನಿಮ್ಮ ಮಕ್ಕಳನ್ನ ಸಂರಕ್ಷಿಸಿ ಅಂಗನವಾಡಿ ಕೇಂದ್ರಗಳಲ್ಲಿ ಓ ಆರ್ ಎಸ್ ಪಟ್ಟಣ ಬಳಕೆ ಮಾಡಿ ಘನ ತ್ಯಾಜ್ಯ ವಸ್ತುಗಳನ್ನ ಸರಿಯಾದ ಜಾಗದಲ್ಲಿ ವಿಲೇವಾರಿ ಮಾಡಿ ಸೊಳ್ಳೆಗಳು ಸಂತಾನೋತ್ಪತ್ತಿ ಆಗದಂತೆ ನೋಡಿಕೊಳ್ಳಿ ಎಂದರು ಪ್ರಾಥಮಿಕ ಆರೋಗ್ಯ ಸುರಕ್ಷತಾ ಅಧಿಕಾರಿ ವಿನ್ಸಿ ಎಂ ಬಿ ರವರು 20 ಮಕ್ಕಳಿಗೆ ವಿವಿಧ ಹಂತದ ಲಸಿಕೆಗಳನ್ನ ನೀಡಿದರು ಕಾರ್ಯಕ್ರಮದಲ್ಲಿ ಭಾಗವಹಿಸಿದ ಗರ್ಭಿಣಿ ಹೆಣ್ಣು ಮಕ್ಕಳಿಗೆ ಪೌಷ್ಟಿಕ ಆಹಾರ ಸೇವನೆ ಬಗ್ಗೆ ತಿಳಿಸಿದರು ಕಾರ್ಯಕ್ರಮದಲ್ಲಿ ಆಶಾ ಕಾರ್ಯಕರ್ತೆ ಮಿಸ್ ಬಾ ಫಾತಿಮಾ ಅಂಗನವಾಡಿ ಕಾರ್ಯಕರ್ತೆ ಹೇಮ ಭಾಗವಹಿಸಿದ್ದರು.