i
ಗಂಗಸಮುದ್ರ ಗ್ರಾಮದ ಪಲ್ಲವಿ ಕಣ್ಮರೆ…
ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ: of Gangasamudra village disappeared…
ಹೊಳಲ್ಕೆರೆ ತಾಲ್ಲೂಕಿನ ಗಂಗಸಮುದ್ರ ಗ್ರಾಮ ನಿವಾಸಿ ಪಲ್ಲವಿ ಎಂಬ ಬಾಲಕಿ ಕಾಣೆಯಾಗಿರುವ ಪ್ರಕರಣ 2023ರ ಸೆಪ್ಟೆಂಬರ್ 27 ರಂದು ಹೊಳಲ್ಕೆರೆ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.
ಕಾಣೆಯಾದ ಬಾಲಕಿಯ ಚಹರೆ ಇಂತಿದೆ. ಪಲ್ಲವಿ (16ವರ್ಷ) ತಂದೆ ಮಲ್ಲಿಕಾರ್ಜುನ, 5 ಅಡಿ ಎತ್ತರ, ಕೋಲುಮುಖ, ಸಾಧಾರಣ ಮೈಕಟ್ಟು, ಕಪ್ಪು ಮೈಬಣ್ಣ, ಎಡಗೈ ಕಿರುಬೆರಳಿನ ಮೇಲೆ ಹಳೆ ಗಾಯದ ಕಲೆ ಇರುತ್ತದೆ. ಕನ್ನಡ ಭಾಷೆ ಮಾತನಾಡುತ್ತಾರೆ. ಕಾಣೆಯಾದ ಸಮಯದಲ್ಲಿ ಬಿಳಿ ಗೀರುಳ್ಳ ಡಿಸ್ಟಂಪರ್ (ತಿಳಿ ಹಸಿರು) ಬಣ್ಣದ ಚೂಡಿಧಾರ್ ಧರಿಸಿರುತ್ತಾರೆ.
ಈ ಮೇಲ್ಕಂಡ ಚಹರೆಯುಳ್ಳ ಬಾಲಕಿ ಕುರಿತು ಮಾಹಿತಿ ತಿಳಿದು ಬಂದಲ್ಲಿ ಹೊಳಲ್ಕೆರೆ ಪೊಲೀಸ್ ಠಾಣೆ ದೂರವಾಣಿ ಸಂಖ್ಯೆ 08191-275233, ಹೊಳಲ್ಕೆರೆ ವೃತ್ತ ನಿರೀಕ್ಷಕರವರ ಕಚೇರಿ 08191-275376, ಚಿತ್ರದುರ್ಗ ಪೊಲೀಸ್ ಉಪಾಧೀಕ್ಷಕರವರ 08194-222430, ಚಿತ್ರದುರ್ಗ ಜಿಲ್ಲಾ ಕಂಟ್ರೋಲ್ ರೂಂ 08194-222782 ಗೆ ಸಂಪರ್ಕಿಸಬೇಕು ಎಂದು ಹೊಳಲ್ಕೆರೆ ಪೊಲೀಸ್ ಠಾಣೆಯ ಪೊಲೀಸ್ ಸಬ್ಇ-ನ್ಸ್ಪೆ4ಕ್ಟರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.