i
ಅತಿಥಿ ಉಪನ್ಯಾಸಕರ ಹುದ್ದೆಗಳಿಗೆ ಅರ್ಜಿ ಆಹ್ವಾನ…
ಚಂದ್ರವಳ್ಳಿ ನ್ಯೂಸ್, ಬೆಂಗಳೂರು: Applications invited for the posts of Guest Lecturer…
ಕರ್ನಾಟಕ ರಾಜ್ಯ ಡಾ. ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿಶ್ವವಿದ್ಯಾಲಯದಲ್ಲಿನ ಕೋರ್ಸುಗಳಾದ ಪ್ರದರ್ಶನ ಕಲೆಗಳಲ್ಲಿ ಸ್ನಾತಕ ಪದವಿ ಮತ್ತು ಸ್ನಾತಕೋತ್ತರ ಪದವಿ ವಿಭಾಗಗಳಲ್ಲಿ ಅತಿಥಿ ಉಪನ್ಯಾಸಕರಾಗಿ ಕಾರ್ಯನಿರ್ವಹಿಸಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
ಯುಜಿಸಿ ನಿಯಮಾವಳಿಗಳ ಅನ್ವಯ ಅರ್ಹತೆ ಹೊಂದಿರುವವರು ನೃತ್ಯ, ಭರತನಾಟ್ಯ, ಮತ್ತು ಕಥಕ್, ಸಂಗೀತ – ಹಿಂದುಸ್ಥಾನಿ ಮತ್ತು ಕರ್ನಾಟಕ, ನಾಟಕ, ವೀಣೆ, ಮೃದಂಗ, ತಬಲ, ಕನ್ನಡ, ಸಂಸ್ಕೃತ ಮತ್ತು ಆಂಗ್ಲ ಭಾಷಾ ವಿಷಯಗಳಿಗೆ ಸಂಬಂಧಿಸಿದಂತೆ ನೆಟ್ / ಕೆ-ಸೆಟ್ ಉತ್ತೀರ್ಣರಾಗಿರುವವರು ಅಥವಾ ಕೋರ್ಸ್ವಬರ್ನೊಂ್ ದಿಗೆ ಪಿಹೆಚ್.ಡಿ, ಪದವಿ ಪಡೆದಿರುವವರು ಅರ್ಹರಾಗಿರುತ್ತಾರೆ. ವಿಶ್ವವಿದ್ಯಾಲಯದ ನಿಯಮಾನುಸಾರ ವೇತನ ನೀಡಲಾಗುವುದು.
ಭರ್ತಿಮಾಡಿದ ಅರ್ಜಿಗಳನ್ನು, ನವೆಂಬರ್ 11 ರೊಳಗೆ ಸಲ್ಲಿಸತಕ್ಕದ್ದು. ಅಭ್ಯರ್ಥಿಗಳು ಎಲ್ಲಾ ಶೈಕ್ಷಣಿಕ ಅರ್ಹತೆ ಅನುಭವದ ವಿವರಗಳು ಮತ್ತು ದೃಢೀಕೃತ ದಾಖಲೆಗಳೊಂದಿಗೆ ನಿಗದಿತ ಅವಧಿಯೊಳಗೆ ಕುಲಸಚಿವರು, ಕರ್ನಾಟಕ ರಾಜ್ಯ ಡಾ. ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶನ ಕಲೆಗಳ ವಿಶ್ವವಿದ್ಯಾಲಯ -570 004 ಇವರಿಗೆ ಅರ್ಜಿಗಳನ್ನು ಕಳುಹಿಸಬೇಕು.
ಹೆಚ್ಚಿನ ಮಾಹಿತಿಗಾಗಿ ವಿಶ್ವವಿದ್ಯಾಲಯದ ಅಧಿಕೃತ ಜಾಲತಾಣ https://musicuniversity.ac.in ದಿಂದ ಪಡೆಯಬಹುದು ಎಂದು ಅಧಿಕೃತ ಪ್ರಕಟಣೆ ತಿಳಿಸಿದೆ.