i
ರೈಲು ನಿಲ್ದಾಣದಲ್ಲಿ ಅಪರಿಚಿತ ಪುರುಷ ಸಾವು…
ಚಂದ್ರವಳ್ಳಿ ನ್ಯೂಸ್, ಶಿವಮೊಗ್ಗ:
ಶಿವಮೊಗ್ಗ-ಭದ್ರಾವತಿ ರೈಲು ನಿಲ್ದಾಣಗಳ ಮಧ್ಯೆ ರೈಲ್ವೆ ಶಿವಮೊಗ್ಗ ಹಳೆಯ ರೈಲು ನಿಲ್ದಾಣದ ಫ್ಲಾಟ್ಫಾರಂ –01ರ ಕೊನೆಯಲ್ಲಿ ಸುಮಾರು 40-45 ವರ್ಷದ ಪುರುಷ ಮಲಗಿದ್ದಲ್ಲೇ ಮೃತಪಟ್ಟಿದ್ದು, ಈತನ ಹೆಸರು, ವಿಳಾಸ ತಿಳಿದುಬಂದಿರುವುದಿಲ್ಲ. ಈತನ ಚಹರೆ ಕಪ್ಪು ಮೈಬಣ್ಣ, ಕೋಲುಮುಖ, ತೆಳುವಾದ ಮೈಕಟ್ಟು, ಸುಮಾರು 05.7 ಅಡಿ ಎತ್ತರ, ತಲೆಯಲ್ಲಿ 1/2 ಉದ್ದದ ಕಪ್ಪು ಮಿಶ್ರಿತ ಬಿಳಿ ಮಿಶ್ರಿತ ಕಪ್ಪು ಕೂದಲು ಇದ್ದು ಮೃತನ ಎಡಗೈ ಮತ್ತು ಬಲಗೈಯಲ್ಲಿ ತಮಿಳು ಅಕ್ಷರದಲ್ಲಿ ಹಚ್ಚೆ ಹಾಕಿಸಿರುತ್ತಾನೆ. ಮೈಮೇಲೆ ಕಪ್ಪು ಚುಕ್ಕೆಗಳಿರುವ ಹಳದಿ ಬಣ್ಣಧ ರೆಡಿಮೇಡ್ ಶರ್ಟ್, ಕಾಫಿ ಬಣ್ಣದ ಪ್ಯಾಂಟ್, ಕಪ್ಪು, ನೀಲಿ ಮತ್ತು ಆಕಾಶ ನೀಲಿ ಬಣ್ಣಗಳ್ಳುಳ್ಳ ಜರ್ಕಿನ್ ಧರಿಸಿರುತ್ತಾನೆ. ಮೃತರ ಸಂಬಂಧಿಗಳು/ವಾರಸುದಾರರು ಪತ್ತೆಯಾದಲ್ಲಿ ಶಿವಮೊಗ್ಗ ರೈಲ್ವೇ ಪೊಲೀಸ್ ಠಾಣೆ ದೂರವಾಣಿ ಸಂಖ್ಯೆ: 08182-222974/ 9480802124 ನ್ನು ಸಂಪರ್ಕಿಸುವಂತೆ ರೈಲ್ವೇ ಪೊಲೀಸ್ ಪ್ರಕಟಣೆ ತಿಳಿಸಿದೆ.