i
ಚಿತ್ರದುರ್ಗ ಲೋಕಸಭಾ ಕ್ಷೇತ್ರದಲ್ಲಿ ಹೆಚ್ಚಿದ ಮತದಾನ, ಫಲಿತಾಂಶ ಉಲ್ಟಾಪಲ್ಟಾ…
ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಚಿತ್ರದುರ್ಗ ಲೋಕಸಭಾ ಕ್ಷೇತ್ರದಲ್ಲಿ ಏಪ್ರಿಲ್-26 ರಂದು ಶುಕ್ರವಾರ ಜರುಗಿದ ಮತದಾನದಲ್ಲಿ ಕಳೆದ 2019-2024ರ ಸಾಲಿಗೆ ಹೊಲಿಕೆ ಮಾಡಿದರೆ ಹೆಚ್ಚಿನ ಮತದಾನವಾಗಿದ್ದು ಶೇ.72.74 ದಾಖಲಾಗಿದೆ.
ಚಿತ್ರದುರ್ಗ ಲೋಕಸಭಾ ಕ್ಷೇತ್ರದಲ್ಲಿ ಹೆಚ್ಚಿದ ಮತದಾನದಿಂದಾಗಿ ಫಲಿತಾಂಶವು ಉಲ್ಟಾಪಲ್ಟಾ ಆಗುವ ಸಾಧ್ಯತೆ ತಳ್ಳಿ ಹಾಕುವಂತಿಲ್ಲ.
ಹೊಸ ಮತದಾರರು, ಇಲ್ಲಿಯ ತನಕ ಮತದಾನದಿಂದ ದೂರ ಉಳಿಯುತ್ತಿದ್ದ ಕೆಲ ವರ್ಗಗಳು ಉತ್ಸಾಹದಿಂದ ಆಗಮಿಸಿ ಮತದಾನ ಮಾಡಿದ್ದು ಇಂಥಹ ಪಕ್ಷವೇ ಗೆಲ್ಲುತ್ತದೆ ಎಂದು ಹೇಳುವ ಧೈರ್ಯ ಮಾಡುವುದು ಕಷ್ಟ. ಇದರ ಜೊತೆಯಲ್ಲಿ ಕ್ಷೇತ್ರಾದ್ಯಂತ ಹಣ ಸದ್ದು ಮಾಡಿದ್ದು ಕೂಡ ಮತದಾನ ಹೆಚ್ಚಳಕ್ಕೆ ಕಾರಣ ಎನ್ನಲಾಗಿದೆ.
ವಿಧಾನ ಸಭಾ ಕ್ಷೇತ್ರವಾರು ಮತಾದಾನ ವಿವರ
ಚಳ್ಳಕೆರೆ – 72.19%,
ಚಿತ್ರದುರ್ಗ-70.42%,
ಹಿರಿಯೂರು-71.49% ,
ಹೊಳಲ್ಕೆರೆ – 73.48%,
ಹೊಸದುರ್ಗ-73.97%,
ಮೊಳಕಾಲ್ಮೂರು- 75.71%,
ಪಾವಗಡ- 68.76%,
ಶಿರಾ-75.70%
2019 ರ ಲೋಕಸಭಾ ಚುನಾವಣೆ ಮತದಾನದ ಮಾಹಿತಿ:
2019ರ ಚಿತ್ರದುರ್ಗ ಲೋಕಸಭಾ ಕ್ಷೇತ್ರದ ಚುನಾವಣೆಯಲ್ಲಿ ಒಟ್ಟು
17,60,633 ಮತದಾರ ಪೈಕಿ 6,39,390 ಪುರುಷ ಮತದಾರ, 603639 ಮಹಿಳಾ ಮತದಾರರು ಹಾಗೂ 6 ಇತರೆ ಮತದಾರರು ಸೇರಿ ಒಟ್ಟು12,43,035 ಮತದಾರು ಇವಿಎಂ ಮೂಲಕ ಮತಚಲಾಯಿಸಿದ್ದರು. ಇದರೊಂದಿಗೆ
3471 ಅಂಚೆ ಮತಗಳು ಸೇರಿ ಒಟ್ಟು 12,46,506 ಜನರು ಮತದಾನ ಮಾಡಿದ್ದರು. ಮತದಾನ ಪ್ರಮಾಣ ಶೇ.70.8 ಆಗಿತ್ತು.
2024ರ ಲೋಕಸಭಾ ಕ್ಷೇತ್ರ ಚುನಾವಣೆಯಲ್ಲಿ 2019 ರ ಚುನಾವಣೆಗಿಂತಲೂ ಶೇಕಡಾವಾರು ಅಂದಾಜು ಶೇ.2 ರಷ್ಟಕ್ಕಿಂತ ಮತದಾನ ಪ್ರಮಾಣ ಹೆಚ್ಚಾಗಿದೆ.