i
ಆನ್ ಲೈನ್ ನಲ್ಲಿ ವೈದ್ಯರಿಗೆ ಲಕ್ಷ ರೂ. ವಂಚನೆ
ಚಂದ್ರವಳ್ಳಿ ನ್ಯೂಸ್, ಶಿವಮೊಗ್ಗ:
ನಗರದ ವೈದ್ಯರೊಬ್ಬರಿಗೆ ಕರೆ ಮಾಡಿದ್ದ ಮಿಲಿಟರಿ ಅಧಿಕಾರಿ ಎಂದು ಹೇಳಿಕೊಂಡ ವ್ಯಕ್ತಿಯು ಬರೋಬ್ಬರಿ ಸುಮಾರು ಒಂದು ಲಕ್ಷ ರೂಪಾಯಿ ಮೋಸಮಾಡಿದ್ದಾನೆ. ಗೂಗಲ್ ಪೇ ಮೂಲಕ ವೈದ್ಯರಿಂದಲೇ ಅಮೌಂಟ್ ನಮೂದಿಸಿಕೊಂಡು ತನ್ನ ಖಾತೆಗೆ ದುಡ್ಡುಹಾಕಿಸಿಕೊಂಡಿದ್ದಾನೆ. ತಮ್ಮ ಮನೆ ಖಾಲಿಯಿದ್ದು ಬಾಡಿಗೆ ನೀಡುವ ಸಂಬಂಧ ಜಾಹಿರಾತೊಂದನ್ನು ವೈದ್ಯರು ನೀಡಿದ್ದರು. ಅದರಲ್ಲಿ ನೀಡಿದ್ದ ನಂಬರ್ವೊಂದಕ್ಕೆ ಅಪರಿಚಿತ ಕರೆ ಮಾಡಿದ್ದ ತನ್ನನ್ನ ಮಿಲಿಟರಿ ಅಧಿಕಾರಿ ಎಂದು ಪರಿಚಯಿಸಿಕೊಂಡಿದ್ದಾನೆ. ಶಿವಮೊಗ್ಗಕ್ಕೆ ತನಗೆ ಟ್ರಾನ್ಸಫರ್ ಆಗಿದೆ ಎಂದಿದ್ದಾನೆ. ಅಡ್ಸಾನ್ಸ್ ಹಣ ಕಳಿಸ್ತಿನಿ ಗೂಗಲ್ ಪೇ ಓಪನ್ ಮಾಡಿಟ್ಟುಕೊಳ್ಳಿ ಎಂದಿದ್ಧಾನೆ. ವೈದ್ಯರು ಇರಬಹುದು ಎಂದು ಗೂಗಲ್ ಪೇ ಓಪನ್ ಮಾಡಿಟ್ಟುಕೊಂಡಿದ್ದಾರೆ. ಆ ತಕ್ಷಣ ಅದಕ್ಕೊಂದು ಲಿಂಕ್ ಬಂದಿದೆ. ಅದರ ಮೇಲೆ ಕ್ಲಿಕ್ ಮಾಡಿದ ಬಳಿ ಹಿಂದೆ ಕರೆ ಮಾಡಿದ್ದವ ಮತ್ತೆ ಕಾಲ್ ಮಾಡಿ ನೀವೇ ಅಮೌಂಟ್ ನಮೂದು ಮಾಡಿ. ಇಲ್ಲಿ ಟ್ರಾನ್ಸಫರ್ ಲೇಟಾಗ್ತಿದೆ ಎಂದಿದ್ದಾನೆ. ಅದನ್ನು ನಂಬಿ ಕ್ಲಿಕ್ ಮಾಡಿದ ಲಿಂಕ್ನಲ್ಲಿ ಅಮೌಂಟ್ ನಮೂದಿಸಿದ್ದ ವೈದ್ಯರಿಗೆ ಅಂತಿಮವಾಗಿ ಅಕೌಂಟ್ನಲ್ಲಿ 95,999 ರೂಪಾಯಿ ಮೋಸವಾಗಿತ್ತು. ಸದ್ಯ ಈ ಸಂಬಂಧ ಸೈಬರ್ ಕ್ರೈಂ ಪೊಲೀಸರು ಕೇಸ್ ದಾಖಲಿಸಿಕೊಂಡಿದ್ದಾರೆ.