i
ಬೈಕ್ ಅಪಘಾತದಲ್ಲಿ ಹಿಂಬದಿ ಸವಾರ ಸಾವು…
ಚಂದ್ರವಳ್ಳಿ ನ್ಯೂಸ್, ಆನವಟ್ಟಿ:
ಸಮೀಪದ ಅಗಸನಹಳ್ಳಿ ಹತ್ತಿರ ಕ್ಯಾಂಟರ್-ಬೈಕ್ ಕ್ಯಾಂಟರ್-ಬೈಕ್ ನಡುವೆ ಸಂಭವಿಸಿದ ಅಪಘಾತದಲ್ಲಿ ಬೈಕ್ನ ಹಿಂಬದಿ ಸವಾರ ಸ್ಥಳದಲ್ಲೇ ಮೃತಪಟ್ಟಿದ್ದು, ಬೈಕ್ ಚಾಲಕನಿಗೆ ತೀವ್ರ ಗಾಯಗಳಾಗಿವೆ.
ಅಗಸನಹಳ್ಳಿಯವರಾದ ಇಬ್ಬರೂ ಬೈಕಿನಲ್ಲಿ ತೆರಳುತ್ತಿದ್ದರು. ಹಿಂಬದಿ ಸವಾರ ಭರ್ಮಜ್ಜ(೩೮) ತಲೆಗೆ ತೀವ್ರ ಪೆಟ್ಟಾಗಿಅಸು ನೀಗಿದ್ದಾರೆ.
ಬೈಕ್ ಚಲಾಯಿಸುತ್ತಿದ್ದ ಚನ್ನಕೇಶವ (೨೮) ಅವರಿಗೆ ತೀವ್ರ ಗಾಯಗಳಾಗಿವೆ. ಕ್ಯಾಂಟರ್ ಚಾಲಕ ಅಪಘಾತ ಸಂಭವಿಸಿದ ಕೂಡಲೇ ಪರಾರಿಯಾಗಿದ್ದಾನೆ. ಆನವಟ್ಟಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.