i
ರಂಗು ರಂಗಿನ ಹೋಳಿಯ ಹಬ್ಬ!
ಚಂದ್ರವಳ್ಳಿ ನ್ಯೂಸ್, ಶಿವಮೊಗ್ಗ:
ಕವಿತೆ
ರಂಗು ರಂಗಿನ ಹೋಳಿಯ ಹಬ್ಬ!
ಬಂದಿತು ಬಂದಿತು ಹೋಳಿಯ ಹಬ್ಬ
ಸಡಗರ ಸಂಭ್ರಮ ತುಂಬಿದ ಹಬ್ಬ
ಬಣ್ಣಗಳೊಂದಿಗೆ ಆಡುವ ಹಬ್ಬ
ಸ್ನೇಹ ಸಂಬಂಧಗಳೆಲ್ಲವ ಮುಳುಗಿಸಿ ತೇಲಿಸುವ ಸುಂದರ ಹಬ್ಬ
ಹಿರಿಯರ, ಕಿರಿಯರ ನಡುವಿನ ಅಂತರ ಕಡಿಮೆ ಮಾಡುವ ಈ ಹಬ್ಬ
ಭೇದ ಭಾವಗಳಿಲ್ಲದೆ ಎಲ್ಲರೂ ಒಂದಾಗಿ ಸಂತೋಷದಿಂದ ತೇಲುವ ಈ ಹೋಳಿ ಹಬ್ಬ
ರಂಗು ರಂಗಾದ ಬಣ್ಣಗಳೊಂದಿಗೆ ಮೋಜು ಮಸ್ತಿಯ ಈ ಹಬ್ಬ
ಇದುವೇ ಸುಂದರ ಕಾಮನ ಹಬ್ಬ
ಅಂದರೆ ಇದು ಹೋಳಿ ಹಬ್ಬ
ಕಾಮಣ್ಣನ ದಹನದೊಂದಿಗೆ ಶುರುವಾಗುವ ಈ ಹಬ್ಬ
ಆತ ಮತ್ತೆ ಬದುಕಿದನೆಂದು ಸಂಭ್ರಮಿಸುವುದೇ ಹೋಳಿ ಹಬ್ಬ
ರಚನೆ: ನಾಗಶ್ರೀ.ಟಿ.ಆರ್, ಹವ್ಯಾಸಿ ಬರಹಗಾರರು, ಶಿವಮೊಗ್ಗ.