ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ:
ನವರಾತ್ರಿ ವಿಜಯದಶಮಿ ಉತ್ಸವದ ಪ್ರಯುಕ್ತ ರಾಷ್ಟ್ರೀಯ ಸ್ವಯಂ ಸೇವಕ ಸಂಘದಿಂದ ಪಥ ಸಂಚಲನ ಕಾರ್ಯಕ್ರಮವು ಬಹಳಷ್ಟು ಯಶಸ್ವಿಯಾಗಿ ಜರುಗಿತು.
ನಗರದ ನೆಲದಾಂಜನೇಯ ದೇವಸ್ಥಾನದಿಂದ ಪ್ರಾರಂಭವಾದ ಪಥ ಸಂಚಲನವು ನೂರಾರು ಸ್ವಯಂಸೇವಕರು ಗಣವೇಷ ಧಾರಿಗಳ ಲಾಠಿ ಹಿಡಿದ ಮೆರವಣಿಗೆ ನಗರದ ಪ್ರಮುಖ ಬೀದಿಗಳಲ್ಲಿ ಸಾಗಿತ್ತು. ಈ ಸಂದರ್ಭದಲ್ಲಿ ರಸ್ತೆ ಬದಿಯಲ್ಲಿ ನಿಂತ ಸಾರ್ವಜನಿಕರು ಹಾಗು ಮನೆಯ ಮಹಡಿಗಳ ಮೇಲೆ ನಿಂತು ಸ್ವಯಂ ಸೇವಕರಿಗೆ ಪುಷ್ಪ ವೃಷ್ಠಿ ಮಾಡುವ ಮೂಲಕ ಗೌರವ ಸಲ್ಲಿಸಿದರು.
ಬಳಿಕ ನೆಲದಾಂಜನೇಯ ದೇವಸ್ಥಾನದ ಆವರಣದಲ್ಲಿ ಆಯೋಜಿಸಿದ್ದ ವೇದಿಕೆ ಕಾರ್ಯಕ್ರಮದೊಂದಿಗೆ ಮುಕ್ತಾಯ ಗೊಳಿಸಲಾಯಿತು.
ಪಥ ಸಂಚಲನದಲ್ಲಿ ನೂರಾರು ಸ್ವಯಂಸೇವಕರು ಗಣವೇಷ ಧರಿಸಿ ಪಾಲ್ಗೊಂಡಿದ್ದರು. ಮಕ್ಕಳು ಹಾಗೂ ವೃದ್ಧರು ಕೂಡ ಗಣವೇಷದಲ್ಲಿ ಭಾಗವಹಿಸಿದ್ದು ವಿಶೇಷವಾಗಿತ್ತು. ಸಂದರ್ಭದಲ್ಲಿ ಕರ್ನಾಟಕ ದಕ್ಷಿಣ ಪ್ರಾಂತದ ಪ್ರಾಂತ ಕಾರ್ಯವಾಹ ಡಾ. ಜಯಪ್ರಕಾಶ್ ರವರು ರಾಷ್ಟೀಯ ಸ್ವಯಂಸೇವಕ ಕುರಿತು ಬೌದ್ಧಕ್ ವಿಚಾರ ಮಂಡನೆ ಮಾಡಿದರು
ಈ ಕಾರ್ಯಕ್ರಮದಲ್ಲಿ ರಾಷ್ಟೀಯ ಸ್ವಯಂ ಸೇವಕ ನೂರಾರು ಕಾರ್ಯಕರ್ತರು ಹಾಜರಿದ್ದರು.



