ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
2025-26ನೇ ಸಾಲಿನಲ್ಲಿ ವಿವಿಧ ಪರೀಕ್ಷೆಗಳಲ್ಲಿ ಅತ್ಯುತ್ತಮ ಅಂಕ ಗಳಿಸಿದ ಹಾಗೂ ಸಾಧನೆ ಮಾಡಿದ ನಾಯಕ ಸಮುದಾಯದ ಪ್ರತಿಭಾವಂತ ವಿದ್ಯಾರ್ಥಿಗಳು ಮತ್ತು ಸಾಧಕರಿಗೆ ಗೌರವಿಸಲು 'ಚಿತ್ರದುರ್ಗ ನಾಯಕ ಸಮಾಜ'ದ ವತಿಯಿಂದ ಪ್ರತಿಭಾ ಪುರಸ್ಕಾರಕ್ಕಾಗಿ ಅರ್ಜಿ ಆಹ್ವಾನಿಸಲಾಗಿದೆ.
ಅರ್ಹತೆಗಳು:
ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿ: ಕನಿಷ್ಠ 90% ಅಂಕ ಗಳಿಸಿರಬೇಕು.
ಪದವಿ (B.A, B.Com, BCA, BSW, Engineering, MBBS ಇತ್ಯಾದಿ): ಕನಿಷ್ಠ 75% ಅಂಕ ಗಳಿಸಿರಬೇಕು.
ಇತರ ಸಾಧಕರು: Ph.D ಪದವಿ ಪಡೆದವರು, IAS, IPS, KAS ಪರೀಕ್ಷೆಗಳಲ್ಲಿ ಆಯ್ಕೆಯಾದವರು ಹಾಗೂ ವಿವಿಧ ಕ್ಷೇತ್ರಗಳಲ್ಲಿ ವಿಶೇಷ ಸಾಧನೆ ಮಾಡಿದವರು ಅರ್ಜಿ ಸಲ್ಲಿಸಬಹುದು.
ಅರ್ಜಿ ಸಲ್ಲಿಸುವ ವಿವರ:
ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ತಮ್ಮ ಸ್ವ-ವಿವರವುಳ್ಳಅರ್ಜಿ ಹಾಗೂ ಅಗತ್ಯ ಪೂರಕ ದಾಖಲೆಗಳೊಂದಿಗೆ ಆಗಸ್ಟ್ 15, 2026 ರೊಳಗಾಗಿ ಅಂಚೆ ಮೂಲಕ ಅಥವಾ ನೇರವಾಗಿ ತಲುಪಿಸಬೇಕಾಗಿದೆ.
ಅರ್ಜಿ ತಲುಪಿಸಬೇಕಾದ ವಿಳಾಸ:
ಬಿ. ಕಾಂತರಾಜ್ (ಅಧ್ಯಕ್ಷರು), ಚಿತ್ರದುರ್ಗ ನಾಯಕ ಸಮಾಜ,
ತುರುವನೂರು ರಸ್ತೆ, ಶ್ರೀ ಅಹೋಬಲ ಟಿವಿಎಸ್ ಪಕ್ಕದ ಆಫೀಸ್, ಚಿತ್ರದುರ್ಗ. ಸಂಪರ್ಕ ಸಂಖ್ಯೆ: 8549992611.
ಹೆಚ್ಚಿನ ಮಾಹಿತಿಗಾಗಿ ಡಾ. ಗಡ್ಡದೇಶ್ವರಪ್ಪ (9448232934) ಅಥವಾ ದರ್ಶನ್ ಇಂಗಳದಾಳ್ (9880137418) ಅವರನ್ನು ಸಂಪರ್ಕಿಸಬಹುದು ಎಂದು ಚಿತ್ರದುರ್ಗ ನಾಯಕ ಸಮಾಜದ ಅಧ್ಯಕ್ಷ ಬಿ. ಕಾಂತರಾಜ್ ತಿಳಿಸಿದ್ದಾರೆ.



