ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಚಿತ್ರದುರ್ಗ ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆ, ಬೋಧಕ ಆಸ್ಪತ್ರೆ (ಸಿಎಂಸಿಆರೈ) ಮತ್ತು ದಾವಣಗೆರೆ ಎಸ್.ಎಸ್. ನಾರಾಯಣ ಹೆಲ್ತ್ ಆಸ್ಪತ್ರೆ ಸಂಯುಕ್ತಾಶ್ರಯದಲ್ಲಿ ಇದೇ ಜುಲೈ ೨೮ರಂದು ಬೆಳಿಗ್ಗೆ ೧೦ ರಿಂದ ಮಧ್ಯಾಹ್ನ ೧ ಗಂಟೆಯವರೆಗೆ ನಗರದ ಸಿಎಂಸಿಆರೈನ ಕೊಠಡಿ ಸಂಖ್ಯೆ ೧೫ರಲ್ಲಿ ಉಚಿತ ಗ್ಯಾಸ್ಟ್ರೋ ಶಿಬಿರ ಏರ್ಪಡಿಸಲಾಗಿದೆ.
ದಾವಣಗೆರೆ ಎಸ್.ಎಸ್.ನಾರಾಯಣ ಹೆಲ್ತ್ ಆಸ್ಪತ್ರೆಯ ಮೆಡಿಕಲ್ ಗ್ಯಾಸ್ಟ್ರೋ ಎಂಟರಾಲಜಿಸ್ಟ್ ಮತ್ತು ಯಕೃತ್ತು ವೈದ್ಯರಾದ ಡಿ.ಕೆ.ಅಶ್ವಿನ್ ಅವರು ಉಚಿತವಾಗಿ ಗ್ಯಾಸ್ಟ್ರೋ ಶಿಬಿರ ನಡೆಸುವರು.
ಹೊಟ್ಟೆನೋವು, ಹೊಟ್ಟೆ ಉಬ್ಬುವಿಕೆ, ಅಜೀರ್ಣ, ಎದೆಯುರಿ, ವಾಕರಿಕೆ, ವಾಂತಿ, ಮಲದಲ್ಲಿ ರಕ್ತ, ಗ್ಯಾಸ್, ವಾಯು, ಅಗಾಗ ತೇಗು ಬರುವುದು, ಮಲಬದ್ಧತೆ, ಅತಿಸಾರ ಬೇದಿ, ಹಸಿವಿನ ಕೊರತೆ, ನುಂಗಲು ತೊಂದರೆ, ತೀವ್ರವಾದ ಹೊಟ್ಟೆ ನೋವು, ವಾಂತಿಯಲ್ಲಿ ರಕ್ತ, ಹಠಾತ್ ತೂಕ ನಷ್ಟ, ಕಮಾಲೆ ಸೇರಿದಂತೆ ಈ ಗ್ಯಾಸ್ಟ್ರೋ ಲಕ್ಷಣಗಳು ಕಂಡುಬಂದರೆ ಸಾರ್ವಜನಿಕರು ಮತ್ತು ಫೋಷಕರು ಈ ಸೇವೆಯ ಸದುಪಯೋಗ ಪಡೆದುಕೊಳ್ಳಬೇಕು.
ಹೆಚ್ಚಿನ ಮಾಹಿತಿಗಾಗಿ ೯೫೩೫೦೨೫೭೪೩, ೭೨೫೯೭೫೯೯೮೨ ಗೆ ಸಂಪರ್ಕಿಸಬಹುದು ಎಂದು ಚಿತ್ರದುರ್ಗ ಸಿಎಂಸಿಆರೈ ವೈದ್ಯಕೀಯ ಅಧೀಕ್ಷಕರು ಹಾಗೂ ಜಿಲ್ಲಾ ಶಸ್ತ್ರ ಚಿಕಿತ್ಸಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.



