LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಕಾರ್ಯಕರ್ತರೊಂದಿಗೆ 'ಮನ್ ಕೀ ಬಾತ್' ವೀಕ್ಷಿಸಿದ ಬಿ.ವೈ. ವಿಜಯೇಂದ್ರ 

Advertisement
Advertisement

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ 'ಮನ್ ಕೀ ಬಾತ್ರೇಡಿಯೋ ಕಾರ್ಯಕ್ರಮವನ್ನು ಬಿಜೆಪಿ ರಾಜ್ಯ ಅಧ್ಯಕ್ಷ ಬಿ.ವೈ. ವಿಜಯೇಂದ್ರ ಅವರು ಬೆಂಗಳೂರಿನ ಶಿವಾಜಿನಗರ ವಿಧಾನಸಭಾ ಕ್ಷೇತ್ರದಲ್ಲಿ ಪಕ್ಷದ ಮುಖಂಡರುಕಾರ್ಯಕರ್ತರು ಹಾಗೂ ಸ್ಥಳೀಯ ನಾಗರಿಕರೊಂದಿಗೆ ವೀಕ್ಷಿಸಿದರು.

ಕಾರ್ಗಿಲ್ ವಿಜಯ್ ದಿವಸ್‌ನ ಹೆಮ್ಮೆಯ ದಿನದಂದೇ ಪ್ರಧಾನಿ ನೀಡಿದ ಸಂದೇಶವು ದೇಶದ ಜನರಲ್ಲಿ ಹೊಸ ಉತ್ಸಾಹ ತುಂಬಿದೆ ಎಂದು ಈ ವೇಳೆ ಅವರು ಹೇಳಿದರು. 

ವಿಕಸಿತ ಭಾರತ ನಿರ್ಮಾಣಕ್ಕೆ ಕರೆ:
ಕಾರ್ಯಕ್ರಮದ ಬಳಿಕ ಮಾತನಾಡಿದ ಬಿ.ವೈ. ವಿಜಯೇಂದ್ರ, "ಕಾರ್ಗಿಲ್ ವಿಜಯ್ ದಿವಸ್‌ನ ಈ ಶುಭ ದಿನದಂದು ದೇಶದ ಯೋಧರ ಅಮರ ತ್ಯಾಗನವ ಭಾರತದ ಸಂಕಲ್ಪ ಹಾಗೂ ಯುವಶಕ್ತಿಯ ಸಾಮರ್ಥ್ಯದ ಕುರಿತು ಪ್ರಧಾನಿಯವರು ನೀಡಿದ ಸಂದೇಶ ಪ್ರತಿಯೊಬ್ಬರಲ್ಲೂ ದೇಶಭಕ್ತಿ ಹಾಗೂ ಹುಮ್ಮಸ್ಸನ್ನು ಹೆಚ್ಚಿಸಿದೆ. ಪ್ರಧಾನಿಗಳ ಈ ಪ್ರೇರಣಾದಾಯಿ ವಿಚಾರಗಳನ್ನು ಪ್ರತಿಯೊಂದು ಮನೆಗೂ ತಲುಪಿಸಿಸಮರ್ಥಸಮೃದ್ಧ ಹಾಗೂ 'ವಿಕಸಿತ ಭಾರತನಿರ್ಮಾಣಕ್ಕಾಗಿ ನಾವೆಲ್ಲರೂ ಒಂದಾಗಿ ಶ್ರಮಿಸಬೇಕಾಗಿದೆ," ಎಂದರು.

ಪ್ರಮುಖರ ಉಪಸ್ಥಿತಿ

ಈ ಸಂದರ್ಭದಲ್ಲಿ ಬೆಂಗಳೂರು ಕೇಂದ್ರ ಜಿಲ್ಲಾಧ್ಯಕ್ಷ ಸಪ್ತಗಿರಿಗೌಡಮಾಜಿ ಪಾಲಿಕೆ ಸದಸ್ಯ ಕಟ್ಟಾ ಜಗದೀಶ್ ಸೇರಿದಂತೆ ಹಲವು ಪ್ರಮುಖ ನಾಯಕರುಕಾರ್ಯಕರ್ತರು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದುಪ್ರಧಾನಿಗಳ 'ಮನ್ ಕೀ ಬಾತ್ಕಾರ್ಯಕ್ರಮವನ್ನು ವೀಕ್ಷಿಸಿದರು.

Advertisement
Advertisement

Author
Chandravalli News
Regional Kannada Daily is a leading news paper in (Karnataka state). Which is having large number of circulation in the districts of Chitradurga, Davanagere, Bellary, Vijayanagara, Shimoga, Chikmagalur, Tumkur, Bangalore, Simultaneously published in rural districts of Bangalore
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಜುಲೈ 28 ರಂದು ಉಚಿತ ಗ್ಯಾಸ್ಟ್ರೋ ಶಿಬಿರನಾಯಕ ಸಮುದಾಯದ ವಿದ್ಯಾರ್ಥಿಗಳ ಪ್ರತಿಭಾ ಪುರಸ್ಕಾರಕ್ಕೆ ಅರ್ಜಿ ಆಹ್ವಾನಜಾತ್ರೆ ಮರುಳೋ ಜನ ಮರುಳೋ ಯಾವುದಯ್ಯ ಹುರಳು?ಐಶ್ವರ್ಯ ಕರಗುತ್ತದೆ, ಆದರ್ಶ ಉಳಿಯುತ್ತದೆಭೋವಿ ಸಮುದಾಯದ ಪ್ರಮುಖ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಮುಖ್ಯಮಂತ್ರಿಗಳಿಗೆ ಇಮ್ಮಡಿ ಸ್ವಾಮೀಜಿ ಮನವಿಚಿತ್ರದುರ್ಗದಲ್ಲಿ ಜುಲೈ 29ಕ್ಕೆ ಗುರುಪೂರ್ಣಿಮೆ ಪ್ರಯುಕ್ತ 'ಗುರುವಂದನೆ'ಜೋಗಿ ಸಮುದಾಯ ಭವನ ನಿರ್ಮಾಣಕ್ಕೆ ₹2 ಕೋಟಿ ಅನುದಾನ ಹಾಗೂ ಹಕ್ಕುಪತ್ರ ವಿತರಣೆಗೆ ಮನವಿ2028ರ ಚುನಾವಣೆಯಲ್ಲಿ ಸ್ಪರ್ಧಿಸಲ್ಲ: ರಾಜಕೀಯ ಸಂನ್ಯಾಸದ ಸುಳಿವು ನೀಡಿದ ಮಾಜಿ ಸಿಎಂ ಸಿದ್ದರಾಮಯ್ಯವಿದ್ಯಾರ್ಥಿ ಹೋರಾಟದ ನೆಪದಲ್ಲಿ ಬೆಂಕಿ ಹಚ್ಚಲು ಯತ್ನಿಸಿದ 'ಮುಲ್ಲಾ'ನ ಕೃತ್ಯ ಖಂಡಿಸಿದ್ದೇನೆಯೇ ಹೊರತು ಮುಸ್ಲಿಂ ಸಮುದಾಯವನ್ನಲ್ಲ: ಸಿ.ಟಿ. ರವಿ ಸ್ಪಷ್ಟನೆ ಕಾರ್ಯಕರ್ತರೊಂದಿಗೆ 'ಮನ್ ಕೀ ಬಾತ್' ವೀಕ್ಷಿಸಿದ ಬಿ.ವೈ. ವಿಜಯೇಂದ್ರ