Press ID & Credential Portal
Apply / Verify  ➔
LIVE TV LocalCrimeNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes
Press & Media Credential Portal
✕
1. Apply for Press ID Card
Register official reporter application with Email OTP.
➔
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
National News

ಪ್ರತಿಭಟನೆಯಿಂದ ರಾಜಕೀಯ ಲಾಭವಿಲ್ಲ, ಜನಪರ ಕೆಲಸಕ್ಕೆ ಗಮನಹರಿಸಿ: ಅಮಿತ್ ಶಾ

ಚಂದ್ರವಳ್ಳಿ ನ್ಯೂಸ್, ನವದೆಹಲಿ:
ಬೀದಿಗಿಳಿದು ಪ್ರತಿಭಟನೆ ಮತ್ತು ಪ್ರದರ್ಶನಗಳನ್ನು ನಡೆಸುವುದರಿಂದ ಯಾವುದೇ ಪ್ರಯೋಜನವಿಲ್ಲ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಪ್ರತಿಪಕ್ಷಗಳಿಗೆ ಕಠಿಣ ಎಚ್ಚರಿಕೆ ನೀಡಿದ್ದಾರೆ. ರಾಜಕೀಯ ನಾಯಕರು ಕೇವಲ ದೊಂಬಿ ಎಬ್ಬಿಸುವುದನ್ನು ಬಿಟ್ಟು ಜನರ ಕಲ್ಯಾಣದ ಕಡೆಗೆ ಗಮನಹರಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ.

ಚುನಾವಣಾ ಆಯೋಗ, ಇವಿಎಂ ಹಾಗೂ ಮತದಾರರ ಪಟ್ಟಿಯ ಪರಿಷ್ಕರಣೆ ಪ್ರಕ್ರಿಯೆಯ ವಿರುದ್ಧ ಕಾಂಗ್ರೆಸ್ ಮತ್ತು ಆಮ್ ಆದ್ಮಿ ಪಕ್ಷ ನಡೆಸುತ್ತಿರುವ 'ವೋಟ್ ಚೋರಿ' ಅಭಿಯಾನವನ್ನು ಅವರು ತೀವ್ರವಾಗಿ ತರಾಟೆಗೆ ತೆಗೆದುಕೊಂಡರು. ದೆಹಲಿಯ ಹೊರವಲಯದಲ್ಲಿ 8,941 ಕೋಟಿ ರೂ. ಮೌಲ್ಯದ 33 ದೆಹಲಿ ಜಲ ಮಂಡಳಿ ಯೋಜನೆಗಳಿಗೆ ಚಾಲನೆ ಮತ್ತು ಶಿಲಾನ್ಯಾಸ ನೆರವೇರಿಸಿ ಮಾತನಾಡಿದ ಅವರು, ವಿರೋಧ ಪಕ್ಷಗಳ ನಕಾರಾತ್ಮಕ ರಾಜಕೀಯ ಧೋರಣೆಯನ್ನು ಖಂಡಿಸಿದರು.

ಜನರ ತೀರ್ಪನ್ನು ಧಿಕ್ಕರಿಸಲು ರಾಜಕೀಯ ಕುತಂತ್ರ ಹಾಗೂ ದೊಂಬಿಯನ್ನು ಬಳಸಲು ಸಾಧ್ಯವಿಲ್ಲ ಎಂದ ಶಾ, "ಚುನಾವಣೆಯಲ್ಲಿ ಗೆಲ್ಲಬೇಕೆಂದರೆ ಜನರ ಮಧ್ಯೆ ಹೋಗಿ ಅವರ ಸಮಸ್ಯೆಗಳನ್ನು ಅರ್ಥಮಾಡಿಕೊಳ್ಳಿ. ನೀವು ಅಧಿಕಾರದಲ್ಲಿರುವ ರಾಜ್ಯಗಳಲ್ಲಾದರೂ ಜನಪರ ಯೋಜನೆಗಳನ್ನು ಜಾರಿಗೊಳಿಸಿ, ಇಲ್ಲದಿದ್ದರೆ ಉಳಿದಿರುವ ನೆಲೆಗಳೂ ಸಹ ಧೂಳೀಪಟವಾಗುತ್ತವೆ" ಎಂದು ಎಚ್ಚರಿಸಿದರು.

‘ವೋಟ್ ಚೋರಿ’ ಕೇವಲ ಸೋಲಿನ ನೆಪ:
ಪ್ರತಿಪಕ್ಷಗಳ ವಿರುದ್ಧ ವಾಗ್ದಾಳಿ ಮುಂದುವರಿಸಿದ ಅಮಿತ್ ಶಾ, "ದೆಹಲಿಯಲ್ಲಿ ವಿರೋಧ ಪಕ್ಷಗಳಿಂದ ಹೊಸ ಆಟ ಶುರುವಾಗಿದೆ. ಬಿಜೆಪಿ ಗೆದ್ದಾಗಲೆಲ್ಲಾ 'ವೋಟ್ ಚೋರಿ' ಆರೋಪ ಹೊರಿಸಲಾಗುತ್ತದೆ. ಆದರೆ, ಇದೇ ಇವಿಎಂ ಮತ್ತು ಚುನಾವಣಾ ಆಯೋಗವಿದ್ದಾಗ ಕಾಂಗ್ರೆಸ್ ಹಿಮಾಚಲ ಪ್ರದೇಶ, ತೆಲಂಗಾಣ ಮತ್ತು ಕರ್ನಾಟಕದಲ್ಲಿ ಗೆಲ್ಲಲಿಲ್ಲವೇ? ನೀವು ಗೆದ್ದರೆ ಪ್ರಜಾಪ್ರಭುತ್ವ ಸರಿ ಇರುತ್ತದೆ, ಸೋತರೆ ಆಯೋಗ ಮತ್ತು ನ್ಯಾಯಾಲಯಗಳು ಕೆಟ್ಟವಾಗುತ್ತವೆಯೇ?" ಎಂದು ಪ್ರಶ್ನಿಸಿದರು.

ಜತೆಗೆ, "ವೋಟ್ ಚೋರಿಯ ಹೆಸರಿನಲ್ಲಿ ಕಾಂಗ್ರೆಸ್ ಮತ್ತು ಎಎಪಿ ಒಳನುಸುಳುಕೋರರ ನಕಲಿ ಮತಗಳನ್ನು ರಕ್ಷಿಸಲು ಹೊರಟಿವೆ. ಆದರೆ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಅಕ್ರಮ ಮತದಾರರ ಪಟ್ಟಿಯನ್ನು ಸ್ವಚ್ಛಗೊಳಿಸುವುದನ್ನು ಮುಂದುವರಿಸಲಿದೆ" ಎಂದು ಸ್ಪಷ್ಟಪಡಿಸಿದರು.

ಮೇ 2029ರೊಳಗೆ ಸ್ವಚ್ಛ ಯಮುನಾ: ದೆಹಲಿಯ ಮಾಲಿನ್ಯ ಮತ್ತು ಯಮುನಾ ನದಿಯ ದುಸ್ಥಿತಿಗೆ ಕಾಂಗ್ರೆಸ್ ಹಾಗೂ ಎಎಪಿ ಆಡಳಿತವೇ ಕಾರಣ ಎಂದು ಆರೋಪಿಸಿದ ಶಾ, ಕೇಂದ್ರ ಸರ್ಕಾರ ಹಾಗೂ ಸಂಬಂಧಿತ ರಾಜ್ಯಗಳು ಜಂಟಿಯಾಗಿ ಕೆಲಸ ಮಾಡುತ್ತಿವೆ ಎಂದರು. ಪ್ರತಿಯೊಂದು ಮನೆಗೂ ಒಳಚರಂಡಿ ಮತ್ತು ಶುದ್ಧ ಕುಡಿಯುವ ನೀರಿನ ಸಂಪರ್ಕ ಕಲ್ಪಿಸಲು ಮೂರು ವರ್ಷಗಳ ಕ್ರಿಯಾ ಯೋಜನೆ ಜಾರಿಯಲ್ಲಿದ್ದು, ಮೇ 2029ರ ವೇಳೆಗೆ ಯಮುನಾ ನಡಿಯನ್ನು ಸಂಪೂರ್ಣ ಸ್ವಚ್ಛಗೊಳಿಸಿ ಜನರ ಮುಂದಿಡುವುದಾಗಿ ಭರವಸೆ ನೀಡಿದರು.

ತ್ಯಾಜ್ಯ ನಿರ್ವಹಣೆ: ದೆಹಲಿಯ ಕಸದ ಬೆಟ್ಟಗಳಿಂದ ಎರಡು ಕೋಟಿ ಟನ್‌ಗೂ ಅಧಿಕ ತ್ಯಾಜ್ಯವನ್ನು ತೆರವುಗೊಳಿಸಿ, 100 ಎಕರೆ ಜಾಗವನ್ನು ಮುಕ್ತಗೊಳಿಸಲಾಗಿದೆ. ಮುಂದಿನ ಎರಡು ವರ್ಷಗಳಲ್ಲಿ ಈ ಸ್ಥಳಗಳನ್ನು ಸುಂದರ ಸಾರ್ವಜನಿಕ ಉದ್ಯಾನವನಗಳನ್ನಾಗಿ ಪರಿವರ್ತಿಸಲಾಗುವುದು ಎಂದು ತಿಳಿಸಿದರು.

ಪಂಜಾಬ್‌ನಲ್ಲಿ ಎನ್‌ಡಿಎ ಸರ್ಕಾರ: ಪಂಜಾಬ್‌ನಲ್ಲಿ ಎಎಪಿ ಸರ್ಕಾರವು ಮಾದಕ ವಸ್ತುಗಳ ಪಿಡುಗನ್ನು ನಿಯಂತ್ರಿಸುವಲ್ಲಿ ಸಂಪೂರ್ಣ ವಿಫಲವಾಗಿದೆ ಎಂದು ಟೀಕಿಸಿದ ಅವರು, 2029ರ ವೇಳೆಗೆ ಪಂಜಾಬ್‌ನಲ್ಲಿ ಎನ್‌ಡಿಎ ಸರ್ಕಾರ ಅಧಿಕಾರಕ್ಕೆ ಬರಲಿದ್ದು, ಅಲ್ಲಿನ ಡ್ರಗ್ಸ್ ಮಾಫಿಯಾವನ್ನು ಸಂಪೂರ್ಣವಾಗಿ ಮಟ್ಟಹಾಕಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

Author
Chandravalli News
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಹರಿಯಬ್ಬೆಯಲ್ಲಿ ಮಕ್ಕಳಿಗಾಗಿ 'ಮಿಡ್ ಬ್ರೈನ್ ಆ್ಯಂಡ್‌ ಥರ್ಡ್ ಐ ಆ್ಯಕ್ಟಿವೇಷನ್' ವಿಶೇಷ ತರಬೇತಿ ಶಿಬಿರತಗಡೂರಿನಲ್ಲಿ ವಿಜಯದಶಮಿ ಹಬ್ಬದ ಸಂಭ್ರಮಕಿತ್ತೂರು ರಾಣಿ ಚೆನ್ನಮ್ಮನ ಚೇತನದಲ್ಲಿ ಚಿರಂತನ ಸ್ವಾತಂತ್ರ್ಯದ ಕನಸು ಕಲ್ಯಾಣ ಕ್ರಾಂತಿಯ ವಿಜಯೋತ್ಸವ: ಮರಣವನ್ನೇ ಮಹಾನವಮಿಯನ್ನಾಗಿಸಿದ ಶರಣರ ವಚನ ಪರಂಪರೆಅಪಾಯಕ್ಕೆ ಆಹ್ವಾನ ನೀಡುತ್ತಿರುವ ವಿವಿ ಸಾಗರ ನಾಲೆಯ ಸೇತುವೆ – ತುರ್ತು ದುರಸ್ತಿಗೆ ಸಾರ್ವಜನಿಕರ ಆಗ್ರಹಮೈಸೂರು ದಸರಾದಲ್ಲಿ ದಲಿತ ಸಚಿವರಿಗೆ ಅಪಮಾನ: ಕಾಂಗ್ರೆಸ್ ಸರ್ಕಾರದ 'ಸಾಮಾಜಿಕ ನ್ಯಾಯ'ದ ಕಪಟ ನಾಟಕ ಬಯಲು - ಆರ್. ಅಶೋಕ್ ವಾಗ್ದಾಳಿದಸರಾ ಮಹೋತ್ಸವ ನಿರ್ವಹಣೆಯಲ್ಲಿ ಕಾಂಗ್ರೆಸ್ ಸರ್ಕಾರ ಸಂಪೂರ್ಣ ವಿಫಲ: ವಿಪಕ್ಷ ನಾಯಕ ಆರ್. ಅಶೋಕ್ ತೀವ್ರ ವಾಗ್ದಾಳಿಬೆಂಗಳೂರಿಗೆ ಪ್ರವಾಹ ತಡೆ ಕಾವಲು: ಮಳೆನೀರು ಕಾಲುವೆ ವ್ಯವಸ್ಥೆ ಬಲಪಡಿಸಲು 2,000 ಕೋಟಿ ಹೂಡಿಕೆ – ಸಚಿವ ಕೃಷ್ಣ ಬೈರೇಗೌಡಮೂವರು ಸಚಿವರ ತಡೆಹಿಡಿದ ಪೊಲೀಸರ ವರ್ತನೆಗೆ ಜೆಡಿಎಸ್‌ತೀವ್ರ ಆಕ್ರೋಶ; ಕಾಂಗ್ರೆಸ್ ವಿರುದ್ಧ ವಾಗ್ದಾಳಿತಾರತಮ್ಯ, ಅಸ್ಪೃಶ್ಯತೆಯಿಂದ ಧರ್ಮದ ಅಸ್ತಿತ್ವಕ್ಕೆ ಧಕ್ಕೆ: ಮಲ್ಲಿಕಾರ್ಜುನ ಖರ್ಗೆ ಕಳವಳ