Press ID & Credential Portal
Apply / Verify  ➔
LIVE TV LocalCrimeNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes
Press & Media Credential Portal
✕
1. Apply for Press ID Card
Register official reporter application with Email OTP.
➔
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
State News

ಸಿದ್ದರಾಮಯ್ಯ ವಿರುದ್ಧದ ಪೆನ್‌ಡ್ರೈವ್ ರಾಜಕೀಯ ಖಂಡನೀಯ: ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಆಕ್ರೋಶ

ಚಂದ್ರವಳ್ಳಿ ನ್ಯೂಸ್, ಹುಬ್ಬಳ್ಳಿ:
 ಮಾಜಿ ಸಿಎಂ ಸಿದ್ದರಾಮಯ್ಯ ಅವರ ಜೊತೆ ವೈಚಾರಿಕ ಭಿನ್ನಾಭಿಪ್ರಾಯಗಳಿದ್ದರೂ
, ಅವರಂತಹ ಹಿರಿಯ ನಾಯಕನಿಗೆ ಪೆನ್‌ಡ್ರೈವ್ ತೋರಿಸಿ ಬೆದರಿಸುವ ರಾಜಕೀಯ ಬೆಳವಣಿಗೆ ತೀವ್ರ ಖಂಡನೀಯ. ಇದರ ಹಿಂದೆ ಯಾರಿದ್ದಾರೆ ಎಂಬುದನ್ನು ಕಾಂಗ್ರೆಸ್ ಹೈಕಮಾಂಡ್ ತಕ್ಷಣವೇ ಸ್ಪಷ್ಟಪಡಿಸಬೇಕು ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಆಗ್ರಹಿಸಿದ್ದಾರೆ.

 ಪಶ್ಚಿಮ ಪದವೀಧರ ಕ್ಷೇತ್ರದ ಚುನಾವಣೆ ಹಿನ್ನೆಲೆಯಲ್ಲಿ ನಗರದ ಫಾತಿಮಾ ಪ್ರೌಢಶಾಲೆಯ ಮತಗಟ್ಟೆಯಲ್ಲಿ ಮತದಾನ ಮಾಡಿದ ನಂತರ ಮಾಧ್ಯಮದವರೊಂದಿಗೆ ಅವರು ಮಾತನಾಡಿದರು.

ಕಾಂಗ್ರೆಸ್‌ನಲ್ಲಿ ಮೌಲ್ಯಗಳ ಕುಸಿತ:
"ಅಧಿಕಾರಕ್ಕಾಗಿ ಏನು ಬೇಕಾದರೂ ಮಾಡುವ ಮನೋಭಾವ ಇಂದಿನ ಕಾಂಗ್ರೆಸ್‌ನಲ್ಲಿ ಕಂಡುಬರುತ್ತಿದೆ. ರಾಜಕೀಯದಲ್ಲಿ ದಿನೇ ದಿನೇ ಮೌಲ್ಯಗಳು ಕುಸಿಯುತ್ತಿರುವುದು ಆತಂಕಕಾರಿ ಸಂಗತಿಯಾಗಿದೆ. ಸಿದ್ದರಾಮಯ್ಯ ಅವರ ವಿಷಯದಲ್ಲಿ ನಡೆದಿರುವ ಈ ಪೆನ್‌ಡ್ರೈವ್ ಪ್ರಕರಣ ಹಾಗೂ ರಾಜಕೀಯ ಬೆಳವಣಿಗೆಗಳ ಸೂತ್ರಧಾರರು ಯಾರು ಎಂಬುದನ್ನು ಕಾಂಗ್ರೆಸ್ ಹೈಕಮಾಂಡ್ ರಾಜ್ಯದ ಜನತೆಯ ಮುಂದೆ ಬಹಿರಂಗಪಡಿಸಬೇಕು" ಎಂದು ಒತ್ತಾಯಿಸಿದರು.

ರಾಜ್ಯ ಸರ್ಕಾರ ಆರ್ಥಿಕವಾಗಿ ದಿವಾಳಿ: ರಾಜ್ಯದ ಆರ್ಥಿಕ ಪರಿಸ್ಥಿತಿಯ ಕುರಿತು ಕಳವಳ ವ್ಯಕ್ತಪಡಿಸಿದ ಜೋಶಿ, "ರಾಜ್ಯದಲ್ಲಿ ಭೀಕರ ಬರಗಾಲವಿದ್ದರೂ ರೈತರಿಗೆ ಪರಿಹಾರದ ಹಣ ಬಿಡುಗಡೆ ಮಾಡಲು ಈ ಸರ್ಕಾರಕ್ಕೆ ಸಾಧ್ಯವಾಗುತ್ತಿಲ್ಲ. ಹಿಂದೆ ಬಿಜೆಪಿ ಸರ್ಕಾರವಿದ್ದಾಗ ಯಡಿಯೂರಪ್ಪ ಹಾಗೂ ಬಸವರಾಜ ಬೊಮ್ಮಾಯಿ ಅವರ ನೇತೃತ್ವದಲ್ಲಿ ರೈತರಿಗೆ ಪ್ರತಿ ಹೆಕ್ಟೇರ್‌ಗೆ ರೂ. 13,000 ಪರಿಹಾರ ನೀಡಲಾಗಿತ್ತು. ಆದರೆ, ಪ್ರಸ್ತುತ ಕಾಂಗ್ರೆಸ್ ಸರ್ಕಾರ ಕನಿಷ್ಠ ರೂ. 2,500 ನೀಡಲೂ ಹಣವಿಲ್ಲ ಎನ್ನುತ್ತಿದೆ. ರಾಜ್ಯ ಸರ್ಕಾರ ಸಂಪೂರ್ಣ ಆರ್ಥಿಕ ದಿವಾಳಿಯತ್ತ ಸಾಗುತ್ತಿದೆ" ಎಂದು ಸಚಿವರು ವಾಗ್ದಾಳಿ ನಡೆಸಿದರು.

ಪ್ರಿಯಾಂಕ್ ಖರ್ಗೆ 'ನಿರುದ್ಯೋಗಿ' ತರಹ ಮಾತನಾಡುತ್ತಿದ್ದಾರೆ:
ಆರ್‌ಎಸ್‌ಎಸ್‌ಪಥಸಂಚಲನಕ್ಕೆ ಪೊಲೀಸ್ ಅನುಮತಿ ಕಡ್ಡಾಯ ಎಂಬ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ ಜೋಶಿ
, "ಅದಕ್ಕೆ ಆರ್‌ಎಸ್‌ಎಸ್‌ಸೂಕ್ತ ರೀತಿಯಲ್ಲಿಯೇ ಉತ್ತರ ನೀಡುತ್ತದೆ. ಪ್ರಿಯಾಂಕ್ ಖರ್ಗೆ ಅವರು ಮಾಡಲು ಕೆಲಸವಿಲ್ಲದ ನಿರುದ್ಯೋಗಿಯಂತೆ ಮಾತನಾಡುತ್ತಿದ್ದಾರೆ. ರಾಜ್ಯದಲ್ಲಿ ಬರಗಾಲ ತೀವ್ರವಾಗಿದೆ, ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ. ಗೃಹ ಸಚಿವರಾಗಿ ಮೊದಲು ಆ ಕಡೆ ಗಮನಹರಿಸಿ ಕಾರ್ಯ ನಿರ್ವಹಿಸಲಿ" ಎಂದು ತಿರುಗೇಟು ನೀಡಿದರು.

ರೈತರ ಬೇಡಿಕೆಗೆ ಕೇಂದ್ರದ ಸಕಾರಾತ್ಮಕ ಸ್ಪಂದನೆ: ಅಕ್ಟೋಬರ್ 26ರಂದು ಕಬ್ಬು ಬೆಳೆಗಾರರ ಕುರಿತು ಸಿಎಂ ಕರೆದಿರುವ ಸಭೆಯ ಬಗ್ಗೆ ಮಾತನಾಡುತ್ತಾ, "ಸಂಸದೀಯ ಸಭೆ ಹಾಗೂ ಪೂರ್ವ ನಿಯೋಜಿತ ಕಾರ್ಯಕ್ರಮಗಳಿರುವುದರಿಂದ ಸಿಎಂ ಸಭೆಯಲ್ಲಿ ಪಾಲ್ಗೊಳ್ಳಲು ಸಾಧ್ಯವಾಗುತ್ತಿಲ್ಲವೆಂದು ತಿಳಿಸಿದ್ದೇನೆ. ಆದರೆ, ಕಬ್ಬು ಬೆಳೆಗಾರ ರೈತರ ನ್ಯಾಯಯುತ ಬೇಡಿಕೆಗಳಿಗೆ ಕೇಂದ್ರ ಸರ್ಕಾರ ಎಂದಿಗೂ ಸಕಾರಾತ್ಮಕವಾಗಿ ಸ್ಪಂದಿಸಲಿದೆ" ಎಂದರು.

ಎಸ್‌ಐಆರ್ ವಿರೋಧಿ ಹೋರಾಟದ ಹಿಂದೆ ಅಂತಾರಾಷ್ಟ್ರೀಯ ಸಂಚು:
"ವಿಶೇಷ ಸಮಗ್ರ ಪರಿಷ್ಕರಣೆ (ಎಸ್‌ಐಆರ್) ವಿರುದ್ಧ ನಡೆಯುತ್ತಿರುವ ಹೋರಾಟದ ಹಿಂದೆ ಅಂತಾರಾಷ್ಟ್ರೀಯ ಸಂಘಟನೆಗಳ ಕೈವಾಡವಿದೆ ಎಂಬ ಶಂಕೆ ವ್ಯಕ್ತವಾಗಿದೆ. ಫ್ರಾನ್ಸ್ ಮತ್ತು ಯುರೋಪ್‌ನಲ್ಲೂ ಎಸ್‌ಐಆರ್ ಸಂಬಂಧಿಸಿದಂತೆ ಹೋರಾಟಗಳು ನಡೆದಿದ್ದು, ಈ ಕುರಿತು ಅಮೆರಿಕದ ಪ್ರಮುಖ ಸುದ್ದಿ ವಾಹಿನಿಯೊಂದು ವರದಿ ಮಾಡಿದೆ. ಕೇವಲ ಅಧಿಕಾರದಲ್ಲಿ ಉಳಿಯುವ ಒಂದೇ ಉದ್ದೇಶದಿಂದ ದೇಶದ ಹಿತಾಸಕ್ತಿಯನ್ನು ಬಲಿ ನೀಡಲಾಗುತ್ತಿದೆ. ದೇಶದಲ್ಲಿ ಅಭದ್ರತೆ ಹಾಗೂ ಅರಾಜಕತೆ ಸೃಷ್ಟಿಸುವ ಹುನ್ನಾರ ನಡೆಯುತ್ತಿದೆ" ಎಂದು ಕೇಂದ್ರ ಸಚಿವರು ತೀವ್ರ ಆತಂಕ ವ್ಯಕ್ತಪಡಿಸಿದರು.

 

Author
Chandravalli News
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಅ. 24 ರಂದು ರೈತರಿಗೆ ಪ್ರಧಾನಮಂತ್ರಿ ಫಸಲ್‌ ಬಿಮಾ ಯೋಜನೆಯ ಪಾಲಿಸಿ ಪ್ರತಿಯ ವಿತರಣೆಅರದೇಶನಹಳ್ಳಿ ಶ್ರೀ ಬಗಳಮುಖಿ ದೇವಾಲಯದಲ್ಲಿ ಸಂಭ್ರಮದ ದಸರಾ ಆಚರಣೆಬೆಂಗಳೂರು ಶಿಕ್ಷಕರ ಕ್ಷೇತ್ರ ಚುನಾವಣೆ.. ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಶೇಕಡಾ 95.94 ಮತದಾನಆಗ್ನೇಯ ಪದವೀಧರ ಕ್ಷೇತ್ರ ಚುನಾವಣೆ ಶೇ.66.73 ಮತದಾನಭೀಕರ ದರೋಡೆ ನಡೆಸಿದ್ದ ಅಪ್ರಾಪ್ತರು ಸೇರಿ ಐವರ ಬಂಧನ; 10 ಜನರ ವಿರುದ್ಧ ಎಫ್‌ಐಆರ್!ಸಿಎಂ, ಗೃಹ ಸಚಿವರ ದೆಹಲಿ ಪ್ರವಾಸದ ಹಿಂದೆ 'ಸ್ಟಿಂಗ್' ಆಪರೇಷನ್ ಗುಟ್ಟು; ಹೆಚ್.ಡಿ.ಕುಮಾರಸ್ವಾಮಿಸಿದ್ದರಾಮಯ್ಯ ವಿರುದ್ಧದ ಪೆನ್‌ಡ್ರೈವ್ ರಾಜಕೀಯ ಖಂಡನೀಯ: ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಆಕ್ರೋಶಕಾಂಗ್ರೆಸ್‌ನಲ್ಲಿ ಸಿದ್ದರಾಮಯ್ಯ ಬಿಟ್ಟರೆ ವೋಟ್‌ಸೆಳೆಯೋ ನಾಯಕರಿಲ್ಲ: ಹೆಚ್‌.ಡಿ. ಕುಮಾರಸ್ವಾಮಿ ವಾಗ್ದಾಳಿಹೈಕೋರ್ಟ್‌ನಿಂದ ಕರ್ನಾಟಕ ಪೊಲೀಸರಿಗೆ ಖಡಕ್ ಎಚ್ಚರಿಕೆ:ಬೊಮ್ಮಸಂದ್ರ - ಹೊಸೂರು ಮೆಟ್ರೋ ಯೋಜನೆಗೆ ಭಾರಿ ವಿರೋಧ