Press ID & Credential Portal
Apply / Verify  ➔
LIVE TV LocalCrimeNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes
Press & Media Credential Portal
✕
1. Apply for Press ID Card
Register official reporter application with Email OTP.
➔
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
State News

ಆಗ್ನೇಯ ಪದವೀಧರ ಕ್ಷೇತ್ರ ಚುನಾವಣೆ ಶೇ.66.73 ಮತದಾನ

ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಕರ್ನಾಟಕ ಆಗ್ನೇಯ ಪದವೀಧರರ ಕ್ಷೇತ್ರದ ಚುನಾವಣೆಗೆ ಜಿಲ್ಲೆಯಲ್ಲಿ ಶುಕ್ರವಾರ ಬೆಳಿಗ್ಗೆ 8 ರಿಂದ‌ ಮಧ್ಯಾಹ್ನ 4 ಗಂಟೆಯವರೆಗೆ ಜರುಗಿದ ಮತದಾನ ಬಹುತೇಕ ಶಾಂತಿಯುತವಾಗಿ ನಡೆದಿದೆ. ಒಟ್ಟು 44,073  ಮತದಾರ ಪೈಕಿ, 17,371ಪುರುಷ ಹಾಗೂ 12,038 ಮಹಿಳಾ ಸೇರಿ ಒಟ್ಟು 29,409 ಮತದಾರರು ತಮ್ಮ ಮತದಾನ ಹಕ್ಕು ಚಲಾಯಿಸಿದ್ದಾರೆ. ಜಿಲ್ಲೆಯಲ್ಲಿ ಶೇ.66.73 ರಷ್ಟು ಮತದಾನ ದಾಖಲಾಗಿದೆ ಎಂದು ಜಿಲ್ಲಾಧಿಕಾರಿ ಎಸ್.ರಮ್ಯಾ ಮಾಹಿತಿ ನೀಡಿದ್ದಾರೆ.

ಜಿಲ್ಲೆಯಲ್ಲಿ ಸುಸೂತ್ರ ಮತದಾನಕ್ಕಾಗಿ 22 ಮುಖ್ಯ ಮತಗಟ್ಟೆಗಳ ಜೊತೆಗೆ 33 ಪೂರಕ ಮತಗಟ್ಟೆಗಳು ಸೇರಿ ಒಟ್ಟು 55 ಮತಗಟ್ಟೆಗಳನ್ನು ಸ್ಥಾಪಿಸಲಾಗಿತ್ತು. ಮುಂಜಾನೆ 8 ಗಂಟೆಗೆ ಮೊದಲು ಮತಗಟ್ಟೆ ಅಧ್ಯಕ್ಷಾಧಿಕಾರಿಗಳು ಹಾಗೂ ಇತರೆ ಮತಗಟ್ಟೆ ಅಧಿಕಾರಿಗಳು ಮತಗಟ್ಟೆಗಳನ್ನು ಮತದಾನಕ್ಕೆ ಸಿದ್ದಗೊಳಿಸಿದರು. ಪದವೀಧರ ಕ್ಷೇತ್ರದ ಚುನಾವಣೆ ಪ್ರಾಶಸ್ತ್ಯ ಆಧಾರಿತ ಮತದಾನ ಪದ್ದತಿ ಅನುಸರಿಸುವುದರಿಂದ, ತಿಳಿ ಗುಲಾಬಿ ಬಣ್ಣ ಬ್ಯಾಲೆಟ್ ಪೇಪರ್ ಮೂಲಕ ಮತದಾನ ನಡೆಯಿತು. ಇದಕ್ಕಾಗಿ ಮತಗಟ್ಟೆ ಅಧಿಕಾರಿಗಳು ಬ್ಯಾಲೆಟ್ ಬಾಕ್ಸ್‌ಗಳನ್ನು ಚುನಾವಣೆ ಆಯೋಗದ ನಿರ್ದೇಶನದಂತೆ, ಮತಗಟ್ಟೆ ಏಜಂಟರ್ ಸಮ್ಮುಖದಲ್ಲಿ ಸೀಲ್ ಮಾಡಿ,ಲೇಬಲ್‌ಗಳನ್ನು ಅಂಟಿಸಿ ಸಿದ್ದಗೊಳಿಸಿದರು.ಯಾವುದೇ ಅಡತಡಗಳು ಇಲ್ಲದೆ 55 ಮತಗಟ್ಟೆಗಳಲ್ಲಿ ಬೆಳಿಗ್ಗೆ 8 ಗಂಟೆ ಸರಿಯಾಗಿ ಮತದಾನ ಪ್ರಕ್ರಿಯೆ ಆರಂಭವಾಯಿತು.

ಮತಗಟ್ಟೆ ಬಳಿ ಬಿ.ಎಲ್.ಓ.ಗಳು ಮತದಾರ ವಿವರಗಳು ಉಳ್ಳ ಸ್ಲಿಪ್‌ ಗಳನ್ನು ವಿತರಿಸಿದರು. ಸ್ಲಿಪ್ ಪಡೆದ ಅರ್ಹ ಮತದಾರರು ಸರಿತಿ ಸಾಲಿನಲ್ಲಿ ನಿಂತು ಮತಚಲಾಯಿಸಿದರು. ಮತದಾನ ಮಾಡಿದವರಿಗೆ ಚುನಾವಣೆ ಸಿಬ್ಬಂದಿ ಕೈ ಬೆರಳುಗಳಿಗೆ ಗುರುತಿನ ಶಾಹಿ ಬಣ್ಣ ಹಚ್ಚಿದರು.

ಆರಂಭದಲ್ಲಿ 2 ಗಂಟೆಗಳ ಕಾಲ ಮತದಾನ ಪ್ರಕ್ರಿಯೆ ಮಂದಗತಿಯಲ್ಲಿ ಇತ್ತು. ಬೆಳಿಗ್ಗೆ 10 ಗಂಟೆ ವೇಳೆಗೆ 939 ಪುರುಷ ಹಾಗೂ 500 ಮಹಿಳೆಯರು ಸೇರಿ 1,439 ಜನರು ಮತಚಲಾಯಿಸಿದರು. ನಂತರ 12 ಗಂಟೆ ವೇಳೆ ಮತದಾನ ಪ್ರಕ್ರಿಯೆ ಸ್ವಲ್ಪ ಚುರುಕುಗೊಂಡಿತು. 3,896 ಪುರುಷ ಹಾಗೂ 2,505 ಮಹಿಳೆಯರು ಸೇರಿ 6,401 ಜನರು ಮತ ಚಲಾಯಿಸಿದರು.ಮಧ್ಯಾಹ್ನ  2 ಗಂಟೆಗೆ 8,963 ಪುರುಷ ಹಾಗೂ 6,409 ಮಹಿಳೆಯರು ಸೇರಿ ಮತದಾನ ಮಾಡಿದವರ ಪ್ರಮಾಣ15,372ಕ್ಕೆ ಏರಿಕೆಯಾಯಿತು.  ಅಂತಿಮವಾಗಿ  17,371ಪುರುಷ ಹಾಗೂ 12,038 ಮಹಿಳಾ ಸೇರಿ ಒಟ್ಟು 29,409 ಮತದಾರರು ಜಿಲ್ಲೆ ಮತದಾನ ಮಾಡಿದ್ದಾರೆ.

 

Author
Chandravalli News
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಅ. 24 ರಂದು ರೈತರಿಗೆ ಪ್ರಧಾನಮಂತ್ರಿ ಫಸಲ್‌ ಬಿಮಾ ಯೋಜನೆಯ ಪಾಲಿಸಿ ಪ್ರತಿಯ ವಿತರಣೆಅರದೇಶನಹಳ್ಳಿ ಶ್ರೀ ಬಗಳಮುಖಿ ದೇವಾಲಯದಲ್ಲಿ ಸಂಭ್ರಮದ ದಸರಾ ಆಚರಣೆಬೆಂಗಳೂರು ಶಿಕ್ಷಕರ ಕ್ಷೇತ್ರ ಚುನಾವಣೆ.. ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಶೇಕಡಾ 95.94 ಮತದಾನಆಗ್ನೇಯ ಪದವೀಧರ ಕ್ಷೇತ್ರ ಚುನಾವಣೆ ಶೇ.66.73 ಮತದಾನಭೀಕರ ದರೋಡೆ ನಡೆಸಿದ್ದ ಅಪ್ರಾಪ್ತರು ಸೇರಿ ಐವರ ಬಂಧನ; 10 ಜನರ ವಿರುದ್ಧ ಎಫ್‌ಐಆರ್!ಸಿಎಂ, ಗೃಹ ಸಚಿವರ ದೆಹಲಿ ಪ್ರವಾಸದ ಹಿಂದೆ 'ಸ್ಟಿಂಗ್' ಆಪರೇಷನ್ ಗುಟ್ಟು; ಹೆಚ್.ಡಿ.ಕುಮಾರಸ್ವಾಮಿಸಿದ್ದರಾಮಯ್ಯ ವಿರುದ್ಧದ ಪೆನ್‌ಡ್ರೈವ್ ರಾಜಕೀಯ ಖಂಡನೀಯ: ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಆಕ್ರೋಶಕಾಂಗ್ರೆಸ್‌ನಲ್ಲಿ ಸಿದ್ದರಾಮಯ್ಯ ಬಿಟ್ಟರೆ ವೋಟ್‌ಸೆಳೆಯೋ ನಾಯಕರಿಲ್ಲ: ಹೆಚ್‌.ಡಿ. ಕುಮಾರಸ್ವಾಮಿ ವಾಗ್ದಾಳಿಹೈಕೋರ್ಟ್‌ನಿಂದ ಕರ್ನಾಟಕ ಪೊಲೀಸರಿಗೆ ಖಡಕ್ ಎಚ್ಚರಿಕೆ:ಬೊಮ್ಮಸಂದ್ರ - ಹೊಸೂರು ಮೆಟ್ರೋ ಯೋಜನೆಗೆ ಭಾರಿ ವಿರೋಧ