Press ID & Credential Portal
Apply / Verify  ➔
Advertisement
LIVE TV LocalCrimeNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes
Press & Media Credential Portal
✕
1. Apply for Press ID Card
Register official reporter application with Email OTP.
➔
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
State News

ಹಿರಿಯ ಪತ್ರಕರ್ತ ಚಿತ್ರದುರ್ಗದ  ಉಮಾಪತಿ ಅವರಿಗೆ 'ರಾಜ್ಯೋತ್ಸವ ಪ್ರಶಸ್ತಿ' ಗೌರವ

​ ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಮಾಧ್ಯಮ ಕ್ಷೇತ್ರದಲ್ಲಿ ಸಲ್ಲಿಸಿದ ಸುದೀರ್ಘ ಹಾಗೂ ಅಪಾರ ಸೇವೆಯನ್ನು ಗುರುತಿಸಿ, ಹಿರಿಯ ಪತ್ರಕರ್ತರಾದ ಡಿ. ಉಮಾಪತಿ ಅವರಿಗೆ 2026ನೇ ಸಾಲಿನ ಪ್ರತಿಷ್ಠಿತ 'ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ' ಲಭಿಸಿದೆ.

​ಚಿತ್ರದುರ್ಗದ ಡಿ. ಉಮಾಪತಿ ಅವರು ದಿವಂಗತ ಕೆ. ದಾಸಪ್ಪ ಹಾಗೂ ದಿವಂಗತ ಹನುಮಮ್ಮ ದಂಪತಿಯ ಪುತ್ರ. ಮೈಸೂರು ವಿಶ್ವವಿದ್ಯಾಲಯದ ಮಹಾರಾಜ ಕಾಲೇಜಿನಿಂದ ಇಂಗ್ಲಿಷ್ ಸಾಹಿತ್ಯದಲ್ಲಿ ಸ್ನಾತಕೋತ್ತರ ಪದವಿ ಪೂರ್ಣಗೊಳಿಸಿದ ಇವರು, ಪತ್ರಿಕೋದ್ಯಮದತ್ತ ಆಕರ್ಷಿತರಾದರು.

​ಖ್ಯಾತ ಪತ್ರಕರ್ತ ಖಾದ್ರಿ ಶ್ಯಾಮಣ್ಣನವರ ಮಾರ್ಗದರ್ಶನದಲ್ಲಿ 'ಕನ್ನಡ ಪ್ರಭ' ಪತ್ರಿಕೆಯ ಮೂಲಕ ತಮ್ಮ ವೃತ್ತಿಜೀವನವನ್ನು ಆರಂಭಿಸಿದ ಉಮಾಪತಿ ಅವರು, ಅತ್ಯುತ್ತಮ ವರದಿಗಾರಿಕೆ ಹಾಗೂ ಅಂಕಣ ಬರಹಗಳ ಮೂಲಕ ಗುರುತಿಸಿಕೊಂಡರು. ತದನಂತರ 'ವಿಜಯ ಕರ್ನಾಟಕ' ಹಾಗೂ 'ಪ್ರಜಾವಾಣಿ' ಪತ್ರಿಕೆಗಳಲ್ಲಿ ಹಲವು ದಶಕಗಳ ಕಾಲ ದೆಹಲಿ ಮೂಲದ ವಿಶೇಷ ಪ್ರತಿನಿಧಿಯಾಗಿ, ರಾಜ್ಯ ಹಾಗೂ ರಾಷ್ಟ್ರ ರಾಜಕಾರಣದ ಕುರಿತು ಪ್ರಭಾವಿ ವಿಶ್ಲೇಷಣೆಗಳನ್ನು ನೀಡಿದ್ದಾರೆ. ಪ್ರಸ್ತುತ ಇವರು 'ಈ ದಿನ.ಕಾಮ್' ಜಾಲತಾಣದ ಗೌರವ ಸಂಪಾದಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

 

 

Author
Chandravalli News
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ದೊಡ್ಡ ತಿಮ್ಮನಹಳ್ಳಿಯಲ್ಲಿ ವಾಲ್ಮೀಕಿ ಜಯಂತಿ ಆಚರಣೆಸಾಮಾಜಿಕ ಅನಿಷ್ಟ ತಡೆಗಟ್ಟಲು ಕಾನೂನಿನ ಅರಿವು ಅತ್ಯಗತ್ಯ:ದಾಸರಿ ಕ್ರಾಂತಿ ಕಿರಣ್ಹಿರಿಯ ರಂಗಭೂಮಿ ಕಲಾವಿದ ಜಿ.ಡಿ. ತಿಮ್ಮಯ್ಯ ಅವರ ಸಾಧನೆ ಮತ್ತು ಪರಿಚಯಹಿರಿಯ ಪತ್ರಕರ್ತ ಚಿತ್ರದುರ್ಗದ  ಉಮಾಪತಿ ಅವರಿಗೆ 'ರಾಜ್ಯೋತ್ಸವ ಪ್ರಶಸ್ತಿ' ಗೌರವಆಗ್ನೇಯ ಪದವೀಧರ ಕ್ಷೇತ್ರದಲ್ಲಿ ಕಾಂಗ್ರೆಸ್‌ಗೆ ಮುಖಭಂಗ: ಬೆಂಬಲವಿದ್ದರೂ ಎಡವಿದ್ದೆಲ್ಲಿ?ರಾಹುಲ್ ಗಾಂಧಿ ನೇತೃತ್ವದ ಒಕ್ಕೂಟದಿಂದ ದೇಶದಲ್ಲಿ ಅರಾಜಕತೆ ಸೃಷ್ಟಿಸಲು ಯತ್ನ: ಶೋಭಾ ಕರಂದ್ಲಾಜೆಬದರಿನಾಥದಿಂದ ಹೊರಟ ಹೆಲಿಕಾಪ್ಟರ್ ಜೋಶಿಮಠ ಬಳಿ ಪತನ: ಆರು ಮಂದಿ ಪ್ರಯಾಣಿಕರ ಸಾವುನ್ಯಾಯಾಂಗದ ವಿರುದ್ಧ ಹೇಳಿಕೆ: CJP ನಾಯಕ ಸೌರವ್ ದಾಸ್‌ಗೆ ಮದ್ರಾಸ್ ಹೈಕೋರ್ಟ್ ನೋಟಿಸ್ಯುವಕನಿಗೆ ಚಾಕು ತೋರಿಸಿ 20 ಲಕ್ಷ ಮೌಲ್ಯದ ಚಿನ್ನ ದೋಚಿದ ಡೇಟಿಂಗ್ ಬಂದಿದ್ದ ಯುವತಿಮುಖ್ಯ ಚುನಾವಣಾ ಆಯುಕ್ತರ ವಿರುದ್ಧ 'ಸಾರ್ವಜನಿಕ ದೋಷಾರೋಪಣೆ' ಮುಂದೂಡಿದ 'ಇಂಡಿಯಾ' ಒಕ್ಕೂಟ