i
ಕನ್ನಡದ ಖ್ಯಾತ ಸಿನೆಮಾ ನಟಿ ರಂಭಾ ಕಾರು ಅಪಘಾತ…
ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಕನ್ನಡದ ಖ್ಯಾತ ಸಿನೆಮಾ ನಟಿ ರಂಭಾ ಕಾರು ಅಪಘಾತಕ್ಕೀಡಾಗಿದ್ದು ಸಣ್ಣಪುಟ್ಟ ಗಾಯಗಳೊಂದಿಗೆ ಅವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ರಂಬಾ ಅವರ ಕಾರು ಅಪಘಾತ ಕೆನಡಾದಲ್ಲಿ ಸಂಭವಿಸಿದ್ದು, ಸಾಮಾಜಿಕ ಜಾಲತಾಣದಲ್ಲಿ ಈ ಬಗ್ಗೆ ರಂಬಾ ಅವರೇ ಬಹಿರಂಗಪಡಿಸಿದ್ದಾರೆ. ರಂಬಾ ಎಂದಿನಂತೆ ತಮ್ಮ ಮಕ್ಕಳನ್ನು ಮಂಗಳವಾರ ಶಾಲೆಯಿಂದ ಕರೆದುಕೊಂಡು ವಾಪಸ್ ಮನೆಗೆ ಹಿಂತಿರುಗುತ್ತಿದ್ದಾಗ ಅವರ ಕಾರಿಗೆ ಮತ್ತೊಂದು ಕಾರು ಡಿಕ್ಕಿ ಹೊಡೆದಿದೆ. ಪರಿಣಾಮ ಸಣ್ಣಪುಟ್ಟ ಗಾಯಗಳೊಂದಿಗೆ ತಾವು ಪಾರಾಗಿರುವುದಾಗಿ ರಂಬಾ ಮಾಹಿತಿ ನೀಡಿದ್ದಾರೆ.
ಕಾರು ಅಪಘಾತದ ಪರಿಣಾಮ ಕಿರಿಯ ಮಗಳು ಸಾಶಾ ಹೊರತುಪಡಿಸಿ ಎಲ್ಲರೂ ಸಣ್ಣಪುಟ್ಟ ಗಾಯಗಳೊಂದಿಗೆ ಅಪಘಾತದಿಂದ ಪಾರಾಗಿದ್ದೇವೆ ಎಂದು ನಟಿ ರಂಬಾ ಮಾಹಿತಿ ನೀಡಿದ್ದಾರೆ. ಕನ್ನಡ ಸೇರಿದಂತೆ ತೆಲುಗು, ತಮಿಳು ಸೇರಿದಂತೆ ಇತರೆ ಭಾಷೆಗಳಲ್ಲಿ ರಂಬಾ ನಟಿಸಿದ್ದು ಸದ್ಯ ಅವರು ಕೆನಡಾದಲ್ಲಿದ್ದಾರೆ.