i
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮತ್ತು ಮಹಿಳಾ ಪಿಎಸ್ಐ ನಡುವೆ ಸರಸ ಸಲ್ಲಾಪ, ಮನನೊಂದ ಪತಿಯಿಂದ ದೂರು…
ಚಂದ್ರವಳ್ಳಿ ನ್ಯೂಸ್, ಕಲಬುರಗಿ:
ಐಎಸ್ ಡಿ ವಿಭಾಗದ ಎಸ್ ಪಿ ಅರುಣ್ ರಂಗರಾಜನ್ ಮತ್ತು ಮಹಿಳಾ ಪಿಎಸ್ಐ ನಡುವೆ ಇದ್ದ ಅನೈತಿಕ ಸಂಬಂಧವನ್ನು ಮಹಿಳಾ ಪಿಎಸ್ಐ ಪತಿಯೇ ಬಯಲು ಮಾಡಿರುವ ಘಟನೆ ಕಲಬುರಗಿ ಜಿಲ್ಲೆಯಲ್ಲಿ ಜರುಗಿದೆ.
ಕಲಬುರಗಿ ಪಟ್ಟಣದ ಐವಾನ್ ಶಾಹಿ ಬಡಾವಣೆಯ ಪಿಡಬ್ಲೂಡಿ ವಸತಿ ಗೃಹದಲ್ಲಿರುವ ಮಹಿಳಾ ಪಿಎಸ್ಐ ಮತ್ತು ಆಕೆಯ ಪತಿ ಹೆಡ್ ಕಾನಸ್ಟೆಬಲ್ ಕಂಟೆಪ್ಪ ಇವರಿಗೆ ತಂಗಲು ಎಸ್ಪಿ ಅರುಣ್ ರಂಗರಾಜನ್ ಅವರು ವ್ಯವಸ್ಥೆ ಮಾಡುತ್ತಾರೆ.
ಅದೇ ಮನೆಯಲ್ಲಿ ಎಸ್ಪಿ ಅರುಣ್ ರಂಗ ರಾಜನ್ ಮತ್ತು ಮಹಿಳಾ ಪಿಎಸ್ಐ ಇಬ್ಬರು ಅನೈತಿಕವಾಗಿ ದೇಹ ಸಂಪರ್ಕ ನಡೆಸುವ ಸಂದರ್ಭದಲ್ಲಿ ಸಂತ್ರಸ್ತ ಪತಿ ಹೆಡ್ ಕಾನ್ಸಟೇಬಲ್ ಕೈಗೆ ಸಿಕ್ಕಿಬಿದ್ದಿದ್ದಾರೆ.
ಮಹಿಳಾ ಪಿಎಸ್ಐ ಪತಿ ಕಂಟೆಪ್ಪ ಅವರು ಪತ್ನಿ ಮತ್ತು ಎಸ್ಪಿ ಇಬ್ಬರು ಸರಸ ಸಲ್ಲಾಪ ಮಾಡುವ ಸಂದರ್ಭದಲ್ಲಿ ಅರೆ ಬೆತ್ತಲೆಯಾಗಿ ಮಲಗಿರುವ ವೀಡಿಯೋ ಮಾಡಿದ್ದಾರೆ. ಸಿಕ್ಕಿಬಿದ್ದ ಸಂದರ್ಭದಲ್ಲಿ ಎಸ್ ಪಿ ಅರುಣ್ ರಂಗರಾಜನ್ ಕಂಟೆಪ್ಪನಿಗೆ ಈ ವಿಷಯ ಯಾರಿಗಾದರೂ ಹೇಳಿದರೆ ಕೊಲೆ ಮಾಡುವ ಬೆದರಿಕೆ ಹಾಕಿ ಹೆದರಿಸಿದ್ದಾರೆ.
ಇವರಿಬ್ಬರ ಅನೈತಿಕ ಸಂಬಂಧ ಹಲವು ದಿನಗಳಿಂದ ಮುಂದುವರೆದಿದ್ದು ಇದರಿಂದ ಬೇಸತ್ತ ಕಂಟೆಪ್ಪ ಇವರಿಬ್ಬರು ಮನೆಯಲ್ಲಿ ಮಲಗಿರುವ ಸಂದರ್ಭದಲ್ಲಿ ವೀಡಿಯೋ ಮಾಡಿ ಸ್ಟೇಸನ್ ಬಜಾರ್ ಪೋಲಿಸ್ ಸ್ಟೇಷನ್ ನಲ್ಲಿ ದೂರು ದಾಖಲಿಸಿದ್ದಾರೆ.
ಚಿತ್ರದುರ್ಗ ಜಿಲ್ಲೆಯಲ್ಲೂ ಅರುಣ್ ರಂಗ ರಾಜನ್ ಅವರು ಕೆಲ ದಿನಗಳ ಕಾಲ ಎಸ್ಪಿ ಆಗಿ ಸೇವೆ ಸಲ್ಲಿಸಿದ್ದರು. ಇಲ್ಲಿಂದ ತೆರಳಿದ ಮೇಲೆ ಕೌಟುಂಬಿಕ ವಿಚಾರಕ್ಕೆ ಸುದ್ದಿಯಾಗಿದ್ದ ಐಪಿಎಸ್ ಅಧಿಕಾರಿ ಅರುಣ್ ರಂಗರಾಜನ್ ಇದೀಗ ಮತ್ತೊಂದು ವಿವಾದದಲ್ಲಿ ಸಿಲುಕಿದ್ದಾರೆ. ಮಹಿಳಾ ಎಎಸ್ಐ ಜತೆ ರಂಗರಾಜನ್ ಅಕ್ರಮ ಸಂಬಂಧ ಹೊಂದಿದ್ದಾರೆ ಎಂಬ ಆರೋಪ ಕೇಳಿಬಂದಿದೆ.