i
ಅಲ್ಲೂ ಮೋದಿ, ಇಲ್ಲೂ ಮೋದಿ, ಎಲ್ಲೆಲ್ಲೂ ಮೋದಿ. ಎಲ್ಲಾ ಭಷ್ಟರ ಹೆಸರ ಮುಂದೆ ಮೋದಿ ಎಂಬ ಸರ್ನೇಮ್ ಇರುತ್ತೆ…
ಚಂದ್ರವಳ್ಳಿ ನ್ಯೂಸ್, ಚೆನ್ನೈ:
ಈ ಹಿಂದೆ ನಟಿ ಖುಷ್ಬೂ ಸುಂದರ್ ಕಾಂಗ್ರೆಸ್ಸಿನಲ್ಲಿದ್ದಾಗ ಅವರು ಪ್ರಧಾನಿ ಮೋದಿ ಕುರಿತು ಟ್ವೀಟ್ವೊಂದು ಮಾಡಿದ್ದರು. ರಾಹುಲ್ ಗಾಂಧಿ ವಿಚಾರ ಇಡೀ ದೇಶದಲ್ಲಿ ಕಿಡಿ ಹೊತ್ತಿಸಿದ ಬೆನ್ನಲ್ಲೇ ನಟಿ ಖುಷ್ಬೂ ಮಾಡಿದ್ದರು ಎನ್ನಲಾದ ಟ್ವೀಟ್ ಈಗ ವೈರಲ್ ಆಗಿದೆ. ಆದ್ದರಿಂದ ಕೂಡಲೇ ಖುಷ್ಬೂ ಅವರನ್ನು ಬಂಧಿಸಲೇಬೇಕು ಎಂದು ಕಾಂಗ್ರೆಸ್ಸಿಗರು ಒತ್ತಡ ಹಾಕುತ್ತಿದ್ದಾರೆ. ಈಗ ಸೋಷಿಯಲ್ ಮೀಡಿಯಾದಲ್ಲಿ ನಟಿ ಖುಷ್ಬೂ ಮಾಡಿದ್ದ ಟ್ವೀಟ್ ಸಖತ್ ಟ್ರೆಂಡಿಂಗ್ನಲ್ಲಿದೆ.
ಅಲ್ಲೂ ಮೋದಿ, ಇಲ್ಲೂ ಮೋದಿ, ಎಲ್ಲೆಲ್ಲೂ ಮೋದಿ. ಎಲ್ಲಾ ಭಷ್ಟರ ಹೆಸರ ಮುಂದೆಯೂ ಮೋದಿ ಎಂಬ ಸರ್ನೇಮ್ ಇರುತ್ತೆ. ಮೋದಿ ಅಂದರೆ ಭಷ್ಟಾಚಾರ, ಭ್ರಷ್ಟಾಚಾರ ಅಂದರೆ ಮೋದಿ ಎಂದು ಐದು ವರ್ಷಗಳ ಹಿಂದೆ ಖುಷ್ಬೂ ಮಾಡಿದ್ದ ಟ್ವೀಟ್ ಇದಾಗಿದೆ. ಕಳೆದ ವಿಧಾನಸಭಾ ಚುನಾವಣೆ ಸಂದರ್ಭದಲ್ಲೇ ಖುಷ್ಬೂ ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದ್ದರು. ಅಲ್ಲದೇ ತಮಿಳುನಾಡಿನ ಥೌಸಂಡ್ ಲೈಟ್ಸ್ ಎಂಬ ವಿಧಾನಸಭಾ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿ ಸೋತಿದ್ದರು. ಈಗ ರಾಹುಲ್ ಗಾಂಧಿಯವರನ್ನು ಸಂಸದ ಸ್ಥಾನದಿಂದ ಅನರ್ಹಗೊಳಿಸಿದ್ದೇ ತಡ ರೊಚ್ಚಿಗೆದ್ದ ಕಾಂಗ್ರೆಸ್ಸಿಗರು ಈಗ ಸಾಮಾಜಿಕ ಜಾಲತಾಣದಲ್ಲಿ ಹಲ್ಚಲ್ ಸೃಷ್ಟಿಸಿದ್ದಾರೆ.
ಕೇಂದ್ರ ಬಿಜೆಪಿ ನಾಯಕರಿಗೆ ಖುಷ್ಬೂ ಟ್ವೀಟ್ ಟ್ಯಾಗ್ ಮಾಡಿ ವೈರಲ್ ಮಾಡಿದ್ದಲ್ಲದೇ ತಮ್ಮ ಪಕ್ಷದ ನಾಯಕಿ ವಿರುದ್ಧ ಕ್ರಮಕ್ಕೆ ಆಗ್ರಹಿಸಿದ್ದಾರೆ.