i
ಪತ್ನಿಯ ಅಕ್ರಮ ಸಂಬಂಧ ಬಯಲು ಮಾಡಿದ ಜಿಪಿಎಸ್ ಸಿಸ್ಟಂ…
ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಕಾರ್ ಒಂದಕ್ಕೆ ಜಿಪಿಎಸ್ ವ್ಯವಸ್ಥೆ ಅಳವಡಿಸಿದ್ದರಿಂದಾಗಿ ಪತ್ನಿಯ ಅಕ್ರಮ ಸಂಬಂಧ ಬಯಲಿದೆ ಬಂದಿರುವ ಘಟನೆ ನಡೆದಿದೆ.
ಬೆಂಗಳೂರಿನ ವ್ಯಕ್ತಿಯೊಬ್ಬ ತನ್ನ ಹೆಂಡತಿಯಿಂದ ಆಗುತ್ತಿದ್ದ ವಂಚನೆ ಪತ್ತೆ ಮಾಡಿ ತೋರಿಸಿದೆ. ತನ್ನ ಪತ್ನಿಗೆ ಇನ್ನೊಬ್ಬಾತನೊಂದಿಗೆ ಅಫೇರ್ ಇರುವುದನ್ನು ಆ ವ್ಯಕ್ತಿ ಜಿಪಿಎಸ್ನಿಂದ ಗೊತ್ತುಮಾಡಿಕೊಂಡಿದ್ದಾರೆ ಮತ್ತು ಪತ್ನಿ ಮತ್ತು ಆಕೆಯ ಪ್ರಿಯಕರನ ವಿರುದ್ಧ ಬೆಂಗಳೂರಿನ ಮಹಾಲಕ್ಷ್ಮೀಪುರಂ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ವ್ಯಕ್ತಿಯ ಹೆಸರು ಬಹಿರಂಗವಾಗಿಲ್ಲ. ಜಿಪಿಎಸ್ನಿಂದಾಗಿ ಪತ್ನಿಯ ಅಕ್ರಮ ಸಂಬಂಧ ಹೇಗೆ ತನಗೆ ಗೊತ್ತಾಯಿತು ಎಂಬುದನ್ನು ಅವರು ಹೇಳಿಕೊಂಡಿದ್ದಾಗಿ, ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ. ಅಂದ ಹಾಗೇ, ಈ ಜೋಡಿಗೆ 2014ರಲ್ಲಿ ಮದುವೆಯಾಗಿ, 6 ವರ್ಷದ ಮಗಳೂ ಇದ್ದಳು. ಆದರೆ ಆಕೆ ಪರ ಪುರುಷನ ತೆಕ್ಕೆಗೆ ಬಿದ್ದಿದ್ದಳು ಎನ್ನಲಾಗಿದೆ.
2020ರಲ್ಲಿ ಕಾರು ಖರೀದಿ ಮಾಡಿದ್ದ ವ್ಯಕ್ತಿಯೊಬ್ಬ ಆ ಕಾರಿಗೆ ಜಿಪಿಎಸ್ ಟ್ರ್ಯಾಕಿಂಗ್ ವ್ಯವಸ್ಥೆ ಅಳವಸಿದ್ದು, ಅದನ್ನು ಆತನ ಮೊಬೈಲ್ಗೆ ಕನೆಕ್ಟ್ ಮಾಡಿಟ್ಟುಕೊಂಡಿದ್ದ. ಆತ ಖಾಸಗಿ ಕಂಪನಿಯಲ್ಲಿ ಉದ್ಯೋಗಿಯಾಗಿದ್ದು, ಬಹುತೇಕ ರಾತ್ರಿ ಪಾಳಿಯಲ್ಲೇ ಕೆಲಸ ಮಾಡುತ್ತಿದ್ದ ಎನ್ನಲಾಗಿದೆ.
ರಾತ್ರಿ ಕೆಲಸ ಮಾಡುತ್ತಿದ್ದ ಸಂದರ್ಭದಲ್ಲಿ ಆತನ ಕಾರು ಮನೆಯಿಂದ ಹೊರಟಿದ್ದು ಗೊತ್ತಾಯಿತು. ಮೊಬೈಲ್ಗೆ ಕನೆಕ್ಟ್ ಆಗಿದ್ದರಿಂದ ಸಹಜವಾಗಿಯೇ ತಿಳಿದು ಮಧ್ಯರಾತ್ರಿ ಕಾರು ಎಲ್ಲಿ ಹೋಗುತ್ತಿದೆ ಎಂದು ಆತನಿಗೆ ಕುತೂಹಲವಾಯಿತು. ಹೀಗೆ ಹೋಗಿ ಹೋಟೆಲ್ ಒಂದರ ಎದುರು ನಿಂತಿತು. ಮುಂಜಾನೆ 5ಗಂಟೆವರೆಗೆ ಕಾರು ಅಲ್ಲೇ ಇತ್ತು ಮತ್ತು 5ಗಂಟೆ ಹೊತ್ತಿಗೆ ವಾಪಸ್ ಹೊರಟು ಮನೆ ತಲುಪಿತು. ನನಗೆ ಅನುಮಾನ ಬಂದು, ಆ ಹೋಟೆಲ್ಗೆ ಹೋಗಿ ವಿಚಾರಿಸಿದೆ. ಆಗಲೇ ನನ್ನ ಪತ್ನಿ ಇನ್ನೊಬ್ಬನೊಂದಿಗೆ ಆ ರೂಮ್ನಲ್ಲಿ ರಾತ್ರಿಯೆಲ್ಲ ತಂಗಿದ್ದಳು ಎಂಬ ವಿಷಯ ಗೊತ್ತಾಯಿತು. ಅವರಿಬ್ಬರೂ ತಮ್ಮ ವೋಟರ್ ಐಡಿ ಬಳಸಿ, ಹೋಟೆಲ್ನಲ್ಲಿ ರೂಮ್ ಬುಕ್ ಮಾಡಿದ್ದರು ಎಂದು ದೂರುದಾರ ವ್ಯಕ್ತಿ ಹೇಳಿಕೊಂಡಿದ್ದಾರೆ.
ಈ ವಿಷಯ ಗೊತ್ತಾಗುತ್ತಿದ್ದಂತೆ ಪತ್ನಿ ಮತ್ತು ಆಕೆಯ ಪ್ರಿಯಕರ ಬೆದರಿಕೆ ಹಾಕಿದ್ದರು ಎಂದು ಪೊಲೀಸರಿಗೆ ಕೊಟ್ಟ ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಅದರ ಅನ್ವಯ ಪೊಲೀಸರು ಮಹಿಳೆ ಮತ್ತು ಆಕೆಯ ಸ್ನೇಹಿತನ ವಿರುದ್ಧ ಕೇಸ್ ದಾಖಲಿಸಿಕೊಂಡಿದ್ದಾರೆ. ಸದ್ಯ ಆ ಮಹಿಳೆಗೆ ನೋಟಿಸ್ ಕೊಡಲಾಗಿದ್ದು, ವಿಚಾರಣೆಗೆ ಕರೆಯಲಾಗಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.