
ಅಂಬಿ ಅಭಿಮಾನಿ ಮಂಜುನಾಥ್ ಗುಂಡಾಳ್ ಕಚೇರಿಗೆ ಜ್ಯೂನಿಯರ್ ಕನ್ವರ್ ಭೇಟಿ…
ಚಂದ್ರವಳ್ಳಿ ನ್ಯೂಸ್, ದಾವಣಗೆರೆ:
ನಟ ಅಭಿಷೇಕ್ ಅಂಬರೀಷ್ ಅಭಿನಯದ ಚೊಚ್ಚಲ ಸಿನಿಮಾ ಅಮರ್ ಸಿನಿಮಾ ಬಿಡುಗಡೆ ಸಮಯದಲ್ಲಿ ಅಮರ’ ಸಿನಿಮಾದ ಮೊದಲ ಟಿಕೆಟ್ಗೆ ಬರೋಬ್ಬರಿ 1 ಲಕ್ಷ ಹಣ ನೀಡಿದ್ದ ಎಂಸಿಸಿ ಎ ಬ್ಲಾಕ್ನಲ್ಲಿನ ದಾವಣಗೆರೆ ಉದ್ಯಮಿ ಮಂಜುನಾಥ್ ಗುಂಡಾಲ್ ಕಚೇರಿಗೆ ಅಭಿಷೇಕ್ ಆಗಮಿಸಿದ್ದರು. ನಗರದ ಬಿಐಇಟಿ ರಸ್ತೆಯಲ್ಲಿ ನಡೆಯುತ್ತಿರುವ ಗಣೇಶ ಮಹೋತ್ಸವದಲ್ಲಿ ಭಾಗವಹಿಸಲು ಬಂದಿದ್ದ ನಟ ಅಭಿಷೇಕ್ ಅಂಬರೀಷ್ ಉದ್ಯಮಿ ಮನೆಗೆ ಭೇಟಿ ನೀಡಿ, ಮಂಜುನಾಥ್ ಗುಂಡಾಳ್ ಆತಿಥ್ಯ ಸ್ವೀಕರಿಸಿದರು. ಮಂಜುನಾಥ್ ಗುಂಡಾಳ್ ಹಿರಿಯ ನಟ ಅಂಬರೀಶ್ ಅವರ ದೊಡ್ಡ ಅಭಿಮಾನಿ ಆಗಿಯಾಗಿದ್ದರು.
ಹೀಗಾಗಿ ಅವರ ಮಗ ಅಭಿಷೇಕ್ ಸಿನಿಮಾವನ್ನು ಫಸ್ಟ್ ಡೇ ಫಸ್ಟ್ ಶೋ ನೋಡಲು 1 ಲಕ್ಷ ಚೆಕ್ ನೀಡಿದ್ದರು. ಅಮರ್’ ಸಿನಿಮಾ ನಿರ್ಮಾಪಕರಾದ ಸಂದೇಶ್ ನಾಗರಾಜ್ ಅವರಿಗೆ ಮಂಜುನಾಥ್ ಅವರು ಚೆಕ್ ನೀಡಿದ್ದನ್ನು ಇಲ್ಲಿ ಸ್ಮರಿಸಬಹುದು. ಅಭಿಷೇಕ್ ರನ್ನು ಕಚೇರಿಗೆ ಆಹ್ವಾನಿಸಿ ಸನ್ಮಾನಿಸಿದ ಮಂಜುನಾಥ್ ಗುಂಡಾಲ್ ಆತ್ಮೀಯವಾಗಿ ಬೀಳ್ಕೊಟ್ಟರು. ಉದ್ಯಮಿ ಮಂಜುನಾಥ್ಗೆ ಮೊದಲಿನಿಂದಲೂ ಹಿರಿಯ ನಟ ಅಂಬರೀಷ್ ಕಂಡ್ರೆ ಅಚ್ಚುಮೆಚ್ಚು, ಅದಕ್ಕಾಗಿಯೇ ಅಂಬರೀಷ್ ಮಗ ಅಭಿಷೇಕ್ ಅಭಿನಯದ ಅಮರ್ ಚಿತ್ರದ ಮೊದಲ ಟಿಕೆಟ್ನ್ನು ಲಕ್ಷರೂ.ಗೆ ಖರೀದಿಸಿ ಮಂಡ್ಯದ ಗಂಡು ಅಭಿಷೇಕ್ ಅಂಬರೀಷ್ ಮೇಲೆ ಇದ್ದ ಅಭಿಮಾನವನ್ನು ತೋರಿಸಿದ್ದರು. ನಟ ಅಭಿಷೇಕ್ ಮಾತನಾಡಿ, ಗಣೇಶ್ ಉತ್ಸವ ಹಾಗೂ ಸಚಿವ ಎಸ್.ಎಸ್.ಮಲ್ಲಿಕಾರ್ಜುನ್ ಹುಟ್ಟು ಹಬ್ಬಕ್ಕೆ ದಾವಣಗೆರೆಗೆ ಬಂದಿದ್ದೇ. ಮಲ್ಲಣ್ಣ ಹಾಗೂ ನನ್ನ ತಂದೆ ತುಂಬಾ ಆಪ್ತ ಸ್ನೇಹಿತರು. ಆದ್ದರಿಂದ ಬರಬೇಕಾಯಿತು. ಹಾಗೆಯೇ ಉದ್ಯಮಿ ಮಂಜುನಾಥ್ರ ಮನೆಗೆ ಬಂದಿದ್ದೇನೆ. ತುಂಬಾ ಖುಷಿಯಾಯಿತು. ಅಭಿಮಾನಿಗಳು ಕೂಡ ಸಾಕಷ್ಟು ಸಂಖ್ಯೆಯಲ್ಲಿ ಬಂದಿದ್ದರು. ಸಂತಸವಾಯಿತು ಎಂದು ಹೇಳಿದರು. ಉದ್ಯಮಿ ಮಂಜುನಾಥ್ ಗುಂಡಾಳ್ ಮಾತನಾಡಿ, ನಾನು ಮೊದಲಿನಿಂದಲೂ ಕಟ್ಟಾ ಅಂಬರೀಷ್ ಅಭಿಮಾನಿಯಾಗಿದ್ದು, ಅವರ ಮಗನಿಗೂ ನಾನು ಅಭಿಮಾನಿಯೇ. ಅವರ ಮೊದಲ ಚಿತ್ರದ ಮೊದಲ ಟಿಕೆಟ್ ನ್ನು 1 ಲಕ್ಷ ರೂಪಾಯಿಗೆ ತೆಗೆದುಕೊಂಡಿದ್ದೇ.. ದಾವಣಗೆರೆಗೆ ಬರುತ್ತಿದ್ದ ವಿಷಯ ಗೊತ್ತಾದ ಹಿನ್ನೆಲೆಯಲ್ಲಿ ಅಭಿಷೇಕ್ ಗೆ ಆಹ್ವಾನ ನೀಡಿದ್ದೇ. ನಮ್ಮ ಕರೆಗೆ ಓಗೊಟ್ಟು ಬಂದಿದ್ದಾರೆ. ಅವರು ಮುಂದೆ ಒಳ್ಳೆ ಚಿತ್ರ ಮಾಡಲಿ ಅಪ್ಪನಂತೆ ದೊಡ್ಡ ನಟನಾಗಿ ಬೆಳೆಯಲಿ ಎಂದು ಆಶಿಸುತ್ತೇನೆ ಎಂದರು.
ಈ ಸಂದರ್ಭದಲ್ಲಿ ಸಿಬ್ಬಂದಿಗಳಾದ ಶ್ವೇತಾ, ಚಿತ್ರದುರ್ಗ ಶಾಸಕ ವೀರೇಂದ್ರ ಪಪ್ಪಿ ಇದ್ದರು. ಈ ಸಂದರ್ಭದಲ್ಲಿ ಅಭಿಷೇಕ್ ಹಾಗೂ ಶಾಸಕ ವೀರೇಂದ್ರ ಪಪ್ಪಿಯರನ್ನು ಸನ್ಮಾನಿಸಲಾಯಿತು.