i
ತೋಟದ ಮನೆಯಲ್ಲಿ 20ಕ್ಕೂ ಹೆಚ್ಚು ಮನುಷ್ಯ ತಲೆ ಬುರುಡೆ ಪತ್ತೆ…
ಚಂದ್ರವಳ್ಳಿ ನ್ಯೂಸ್, ರಾಮನಗರ:
ಜೋಗರದೊಡ್ಡಿ ಗ್ರಾಮದ ತೋಟದ ಮನೆಯೊಂದರಲ್ಲಿ 20ಕ್ಕೂ ಹೆಚ್ಚು ಮನುಷ್ಯನ ಬುರುಡೆಗಳು ಸೋಮವಾರ ಪತ್ತೆಯಾಗಿವೆ. ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಬಲರಾಮ್ ಎಂಬಾತನನ್ನು ವಶಕ್ಕೆ ಪಡೆದಿದ್ದಾರೆ.
ಬಿಡದಿ ಬಳಿಯ ಜೋಗನಹಳ್ಳಿ ಗ್ರಾಮದ ತೋಟದ ಮನೆಯಲ್ಲಿ ತಲೆಬುರುಡೆಗಳು ಪತ್ತೆಯಾಗಿದ್ದು, ಬಲರಾಮ್ಎಂಬಾತನಿಗೆ ಸೇರಿದ ಈ ತೋಟದ ಮನೆಯಲ್ಲಿ ಪತ್ತೆಯಾಗಿರುವ ತಲೆಬುರುಡೆಗಳನ್ನು ಒಂದೇ ಕೋಣೆಯಲ್ಲಿ ಸಂಗ್ರಹಿಸಿ ಇಡಲಾಗಿದ್ದು ಇದರ ಹಿನ್ನೆಲೆ ಬೆಚ್ಚಿ ಬೀಳಿಸುವಂತಿದೆ.
ತೋಟದ ಮನೆಯಲ್ಲಿರುವ ಈ ತಲೆ ಬುರುಡೆಗಳಿಗೆ ನಿತ್ಯ ಪೂಜೆ ಮಾಡಲಾಗುತ್ತದೆ. ಈ ಮೂಲಕ ಬಲರಾಮ ಕಂಡ ಕಂಡವರ ಮೇಲೆ ಮಾಟ ಮಂತ್ರ ಮಾಡುತ್ತಾನೆ ಎಂದು ಆರೋಪಿಸಲಾಗಿದೆ. ಗ್ರಾಮಸ್ಥರು ಇದರ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದು, ಪೊಲೀಸರು ಆತನನ್ನು ಠಾಣೆಗೆ ಕರೆದುಕೊಂಡು ಬಂಧಿಸಿದ್ದಾರೆ.