i
ಚಲಿಸುತ್ತಿದ್ದ ರೈಲಿಗೆ ಸಿಲುಕಿ ಅಪರಿಚಿತ ವ್ಯಕ್ತಿ ಸಾವು…
ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ:
ಚಲಿಸುತ್ತಿದ್ದ ರೈಲಿಗೆ ಸಿಲುಕಿ ಅಪರಿಚಿತ ವ್ಯಕ್ತಿಯೊಬ್ಬ ಮೃತಪಟ್ಟಿರುವ ಘಟನೆ ತಾಲೂಕಿನ ಬಾಶೆಟ್ಟಿಹಳ್ಳಿಯ ರೈಲ್ವೆ ಸೇತುವೆ ಬಳಿ ನಡೆದಿದೆ.
ಮೃತ ವ್ಯಕ್ತಿಯ ಹೆಸರು, ವಿಳಾಸ ತಿಳಿದುಬಂದಿರುವುದಿಲ್ಲ. ಮೃತನ ಚಹರೆ- 5’5 ಅಡಿ ಎತ್ತರ, ಎಣ್ಣೆಗೆಂಪು ಮೈಬಣ್ಣ, ಕೋಲು ಮುಖ, ಅಗಲವಾದ ಹಣೆ, ತಲೆಯಲ್ಲಿ ಸುಮಾರು 1 ಇಂಚು ಉದ್ದದ ಕಪ್ಪು ಕೂದಲು ಇದ್ದು, ದೃಢವಾದ ಶರೀರ ಹೊಂದಿರುತ್ತಾರೆ.
ನೀಲಿ ಬಿಳಿ ಚೆಕ್ಸ್ ಬಣ್ಣದ ಹರಿದ ಟೀ ಶರ್ಟ್, ಸಿಮೆಂಟ್ ಬಣ್ಣದ ಜೀನ್ಸ್ ಪ್ಯಾಂಟ್ ಧರಿಸುತ್ತಾನೆ. ಮೆರೂನ್ ಬಣ್ಣದ ಅಂಡರ್ ವೇರ್ ಇದ್ದು ವಾರಸುದಾರರು ಯಾರಾದರು ಇದ್ದಲ್ಲಿ ರೈಲ್ವೆ PSI 9480802118/ ದೊಡ್ಡಬಳ್ಳಾಪುರ ರೈಲ್ವೆ ಪೊಲೀಸ್ 9480802143 ಸಂಖ್ಯೆಯನ್ನ ಸಂಪರ್ಕಿಸಲು ಕೋರಿದೆ.