i
ಹರಿಯಬ್ಬೆ ಸರ್ಕಾರಿ ಪಿಯು ಕಾಲೇಜಿಗೆ ಉತ್ತಮ ಫಲಿತಾಂಶ…
ಚಂದ್ರವಳ್ಳಿ ನ್ಯೂಸ್, ಹರಿಯಬ್ಬೆ:
ತಾಲೂಕಿನ ಹರಿಯಬ್ಬೆ ಸರ್ಕಾರಿ ಪದವಿ ಪೂರ್ವ ಕಾಲೇಜಿನ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಶೇ.72.2ರಷ್ಟು ಫಲಿತಾಂಶ ಲಭಿಸಿದೆ ಎಂದು ಕಾಲೇಜಿನ ಪ್ರಾಂಶುಪಾಲ ಜಿ.ರಾಮಚಂದ್ರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.ಪರೀಕ್ಷೆ ಬರೆದ ಒಟ್ಟು ವಿದ್ಯಾರ್ಥಿಗಳಲ್ಲಿ 6 ವಿದ್ಯಾರ್ಥಿಗಳು ಅತ್ಯುನ್ನತ ಶ್ರೇಣಿ ಹಾಗೂ 37 ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ.
ಕಲಾ ವಿಭಾಗದಲ್ಲಿ ರಾಧಿಕಾ.ಆರ್(೫೪೮), ಸ್ಫೂರ್ತಿ ಎಸ್.(೫೨೪), ವಾಣಿಜ್ಯ ವಿಭಾಗದಲ್ಲಿ ನಿತ್ಯ ಎಸ್.ಬಿ(೫೩೫), ಸೃಷ್ಟಿ.ಡಿ.ಟಿ (೫೧೨), ವಿಜ್ಞಾನ ವಿಭಾಗದಲ್ಲಿ ಮೇಘಾ.ಕೆ(೫೧೬), ಮೇಘನ (೫೧೦) ಅತಿ ಹೆಚ್ಚು ಅಂಕಗಳನ್ನು ಗಳಿಸಿದ್ದಾರೆ. ಅಭಿವೃದ್ಧಿ ಸಮಿತಿ ಸದಸ್ಯರು ಹಾಗೂ ಉಪನ್ಯಾಸಕರು ಅಭಿನಂದಿಸಿದ್ದಾರೆ.