i
ನೆಂಟರ ಮನೆಗೆ ಬಂದು ನೀರು ಪಾಲಾದ ಇಬ್ಬರು ಬಾಲಕರು…
ಚಂದ್ರವಳ್ಳಿ ನ್ಯೂಸ್, ಶಿವಮೊಗ್ಗ:
ಹೊಳೆಹೊನ್ನೂರು ಪೊಲೀಸ್ಠಾಣೆ ವ್ಯಾಪ್ತಿಯಲ್ಲಿ ಚಾನಲ್ಗೆ ಈಜಲು ತೆರಳಿದ್ದ ಇಬ್ಬರು ಬಾಲಕರು ಸಾವನ್ನಪ್ಪಿದ್ದಾರೆ. ಕುಂದಾಪುರದಿಂದ ನೆಂಟರ ಮನೆಗೆ ಬಂದಿದ್ದ ವೇಳೆ ಹೀಗಾಗಿದೆ ಎಂದು ತಿಳಿದು ಬಂದಿದೆ.
ನಡೆದಿದ್ದೇನು?
ಹೊಳೆಹೊನ್ನೂರು ಸಮೀಪದ ಗುಡಮಗಟ್ಟೆಯಲ್ಲಿರುವ ಭದ್ರಾ ಚಾನಲ್ನಲ್ಲಿ ಘಟನೆ ಸಂಭವಿಸಿದೆ. ಮೃತರನ್ನು ರಜತ್ಹಾಗೂ ರೋಹನ್ಎಂದು ಗುರುತಿಸಲಾಗಿದೆ. 15 ವರ್ಷ ಹಾಗೂ 10 ವರ್ಷದ ಬಾಲಕರಿಬ್ಬರು ಕುಂದಾಪುರದಿಂದ ನೆಂಟರ ಮನೆಗೆ ಬಂದಿದ್ದರು. ನಿನ್ನೆ ಸಂಜೆ ಮೂರುವರೆ ನಾಲ್ಕು ಗಂಟೆ ಸುಮಾರಿಗೆ ಇಬ್ಬರು ಭದ್ರಾ ಚಾನಲ್ಬಳಿ ಬಂದಿದ್ದಾರೆ. ಚಾನಲ್ಏರಿ ಮೇಲೆ ಬಂದ ಇಬ್ಬರು ಬಾಲಕರ ಪೈಕಿ ಚಿಕ್ಕವನು ನೀರಿಗಿಳಿದಿದ್ದಾನೆ. ಆದರೆ ನೀರಿನ ಸೆಲೆಯಲ್ಲಿ ಆತ ಈಜಲಾಗದೇ ಮುಳಗಲು ಆರಂಭಿಸಿದ್ದಾನೆ. ಆತನನ್ನು ರಕ್ಷಿಸಲು ಇನ್ನೊಬ್ಬನು ನೀರಿಗಿಳಿದಿದ್ದು, ಆತನೂ ಸಹ ಚಾನಲ್ನಲ್ಲಿ ಮುಳುಗಿದ್ದಾನೆ. ವಿಷಯ ತಿಳಿಯುತ್ತಲೇ ಸ್ಥಳದಲ್ಲಿ ಅಗ್ನಿಶಾಮಕ ಸಿಬ್ಬಂದಿ, ಪೊಲೀಸ್ಸಿಬ್ಬಂದಿ ಹುಡುಕಾಟ ನಡೆಸಿದ್ದಾರೆ. ಸ್ಥಳದಲ್ಲಿ ಬಟ್ಟೆ ಮಾತ್ರ ಪತ್ತೆಯಾಗಿದ್ದರಿಂದ ಪ್ರಕರಣ ಅನುಮಾನ ಸಹ ಮೂಡಿಸಿತ್ತು. ಆನಂತರ ರಾತ್ರಿ 9.30 ರ ಸುಮಾರಿಗೆ ಇಬ್ಬರು ಬಾಲಕರ ಮೃತದೇಹ ಪತ್ತೆಯಾಗಿದೆ. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಶವ ಮಹಜರ್ನಡೆಸಿ ಪೋಷಕರಿಗೆ ಬಾಲಕರ ಮೃತದೇಹವನ್ನು ಒಪ್ಪಿಸಿದ್ದಾರೆ.