i
ನೂತನ ಜಿಲ್ಲಾಧಿಕಾರಿ ದಿವ್ಯಪ್ರಭುರವರಿಗೆ ಉಪಾಧ್ಯಕ್ಷ ಎಂ.ಎ.ಸೇತೂರಾಮ್ ಅವರಿಂದ ಗೌರವ ಸಮರ್ಪಣೆ…
ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ನೂತನ ಜಿಲ್ಲಾಧಿಕಾರಿ ದಿವ್ಯಪ್ರಭುರವರು ಸಿಟಿ ಇನ್ಸ್ಟಿಟ್ಯೂಟ್ಗೆ ಅಧ್ಯಕ್ಷರಾಗಿರುವುದರಿಂದ ಮಂಗಳವಾರ ಟೌನ್
ಕ್ಲಬ್ನಲ್ಲಿ ಸ್ವಾಗತ ಸಮಾರಂಭ ಹಮ್ಮಿಕೊಳ್ಳಲಾಗಿತ್ತು.
ಸಿಟಿ ಇನ್ಸ್ಟಿಟ್ಯುಟ್ನಿಂದ ಸನ್ಮಾನ ಸ್ವೀಕರಿಸಿ ಮಾತನಾಡಿದ ಜಿಲ್ಲಾಧಿಕಾರಿ ದಿವ್ಯಪ್ರಭು ಟೌನ್ ಕ್ಲಬ್ಗೆ ನಾನು ಅಧ್ಯಕ್ಷೆಯಾಗಿರುವುದು
ಖುಷಿ ತಂದಿದೆ. ಸಿಟಿ ಇನ್ಸ್ಟಿಟ್ಯೂಟ್ ಎಂದರೆ ಒಂದು ಕುಟುಂಬವಿದ್ದಂತೆ ಎಲ್ಲರೂ ಒಟ್ಟಿಗೆ ಸೇರಿ ಮುನ್ನಡೆಸಿಕೊಂಡು ಹೋಗಬೇಕು.
ಅದಕ್ಕೆ ನನ್ನ ಸಹಕಾರವಿದೆ ಎಂದು ಹೇಳಿದರು.
ಟೌನ್ ಕ್ಲಬ್ ಉಪಾಧ್ಯಕ್ಷ ಎಂ.ಎ.ಸೇತೂರಾಂ, ಬಿ.ಚಿತ್ರಲಿಂಗಪ್ಪ, ವಿ.ಅರುಣ್, ವೀರೇಂದ್ರಕುಮಾರ್ ಇನ್ನು ಮುಂತಾದವರು ಈ
ಸಂದರ್ಭದಲ್ಲಿದ್ದರು.