i
ಹೊಳಲ್ಕೆರೆ ಮನೆಯಿಂದಲೇ ಮತದಾನ ಮಾಡಿದ ಹಿರಿಯ ನಾಗರಿಕರು ಮತ್ತು ವಿಶೇಷ ಚೇತನರು…
ಚಂದ್ರವಳ್ಳಿ ನ್ಯೂಸ್, ಹೊಳಲ್ಕೆರೆ:
ಹೊಳಲ್ಕೆರೆ ವಿಧಾನಭಾ ಕ್ಷೇತ್ರದ ಚುನಾವಣೆ ತಂಡದ ಅಧಿಕಾರಿಗಳು ಹೊಳಲ್ಕೆರೆ ಕ್ಷೇತ್ರ ವ್ಯಾಪ್ತಿಯಲ್ಲಿ ಬರುವ ಎಲ್ಲಾ ಗ್ರಾಮಗಳಿಗೆ ಮೇ-3ರಂದು ಬುಧವಾರ 80 ವರ್ಷಕ್ಕೂ ಮೇಲ್ಪಟ್ಟ ಹಿರಿಯ ನಾಗರಿಕರು ಮತ್ತು ವಿಶೇಷ ಚೇತನರ ಮನೆಗಳಿಗೆ ಭೇಟಿ ನೀಡಿ ಅವರ ನಿವಾಸ ಸ್ಥಳದಲ್ಲಿಯೇ ಅಂಚೆ ಮತ ಪತ್ರದ ಮೂಲಕ ಮತದಾನ ಮಾಡಿಸಿದರು.
ಹೊಳಲ್ಕೆರೆ ಕ್ಷೇತ್ರದ ಚುನಾವಣಾಧಿಕಾರಿ ಪಿ ವಿವೇಕಾನಂದ ಅಂಚೆ ಮತದಾನಕ್ಕೆ ನಿಯೋಜಿಸಿದ್ದ ಚುನಾವಣೆ ತಂಡದ ಅಧಿಕಾರಿಗಳೊಂದಿಗೆ ಮತಗಟ್ಟೆ ಸಂಖ್ಯೆ 154, ಆಡನೂರು ಗ್ರಾಮಕ್ಕೆ ಭೇಟಿ ನೀಡಿ 80 ವರ್ಷಕ್ಕೂ ಮೇಲ್ಪಟ್ಟ ಹಿರಿಯ ನಾಗರಿಕರಿಂದ ಅಂಚೆ ಮತದಾನ ಮಾಡಿಸಿದರು. ಮೇಲುಸ್ತುವಾರಿ ಸೆಕ್ಟರ್ ಅಧಿಕಾರಿ ಹೊಳಲ್ಕೆರೆ ಪುರಸಭೆ ಮುಖ್ಯಾಧಿಕಾರಿ ಎ.ವಾಸಿಂ ಮತ್ತು ಟಿ ಎನ್ ತಿಪ್ಪೇಸ್ವಾಮಿ, ಮತದಾನ ಅಧಿಕಾರಿ ಆರ್ ಪ್ರಶಾಂತ ಸಾಗರ, ತಿಪ್ಪೇಸ್ವಾಮಿ ಜಿ, ಮೈಕ್ರೋ ಅಬ್ಸರ್ವರ್ ಕೆ ಶ್ರೀನಿವಾಸ ರಾವ್, ಹರೀಶ್, ಆನಂದ್ ಹಾಗೂ ಆರಕ್ಷಕ ಸಿಬ್ಬಂದಿಗಳನ್ನು ಒಳಗೊಂಡ ನಿಯೋಜಿತ ಅಧಿಕಾರಿಗಳ ತಂಡ ಹಾಜರಿದ್ದು ಅಂಚೆ ಮತ ಪತ್ರದ ಮೂಲಕ ಮತದಾನ ಮಾಡಿಸುವ ಪ್ರಕ್ರಿಯೆಯಲ್ಲಿ ಪಾಲ್ಗೊಂಡಿದ್ದರು.