i
9 ಮತ್ತು 10ನೇ ಸುತ್ತಿನಲ್ಲಿ ಚಿತ್ರದುರ್ಗ ಕಾಂಗ್ರೆಸ್ ಭಾರೀ ಮುನ್ನಡೆ, ಹೊಳಲ್ಕೆರೆ ಕಾಂಗ್ರೆಸ್-ಬಿಜೆಪಿ ತೀವ್ರ ಸೆಣಸಾಟ?…
ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ: votes counting
ಚಿತ್ರದುರ್ಗ ಜಿಲ್ಲೆಯ ಆರು ವಿಧಾನಸಭಾ ಕ್ಷೇತ್ರಗಳ ಮತ ಎಣಿಕೆ ಆರಂಭವಾಗಿದ್ದು 10ನೇ ಸುತ್ತಿನಲ್ಲಿ ಹೊಳಲ್ಕೆರೆ ವಿಧಾನಸಭಾ ಕ್ಷೇತ್ರದ ಭಾರತೀಯ ರಾಷ್ಟ್ರೀಯ ಕಾಂಗ್ರೇಸ್ ಪಕ್ಷದ ಹೆಚ್.ಆಂಜನೇಯ 39051, ಭಾರತೀಯ ಜನತಾ ಪಕ್ಷದ ಎಂ.ಚಂದ್ರಪ್ಪ 39438, ಪಕ್ಷೇತರ ಅಭ್ಯರ್ಥಿ ಡಾ.ಎಲ್.ಜಯಸಿಂಹ 9096
ಇವರುಗಳು ಮತಗಳಿದ್ದಾರೆ.
ಚಿತ್ರದುರ್ಗ ವಿಧಾನಸಭಾ ಕ್ಷೇತ್ರದ 6ನೇ ಸುತ್ತಿನಲ್ಲಿ ಕಾಂಗ್ರೆಸ್ ವೀರೇಂದ್ರಪ್ಪ 36742, ಶಾಸಕ ತಿಪ್ಪಾರೆಡ್ಡಿ 21543 ಮತಗಳನ್ನು ಗಳಿಸಿದ್ದಾರೆ.
ಚಳ್ಳಕೆರೆ ವಿಧಾನಸಭಾ ಕ್ಷೇತ್ರದ 9ನೇ ಸುತ್ತಿನಲ್ಲಿ ಕಾಂಗ್ರೆಸ್ ರಘುಮೂರ್ತಿ 33677, ಬಿಜೆಪಿ 12021, ಜೆಡಿಎಸ್ ರವೀಶ್-21238, ಪಕ್ಷೇತರ ಕುಮಾರಸ್ವಾಮಿ 14906 ಮತಗಳನ್ನು ಗಳಿಸಿದ್ದಾರೆ.
ಮೊಳಕಾಲ್ಮೂರು 5ನೇ ಸುತ್ತಿನಲ್ಲಿ ಕಾಂಗ್ರೆಸ್ ಗೋಪಾಲಕೃಷ್ಣ 26655, ಬಿಜೆಪಿ ಎಸ್.ತಿಪ್ಪೇಸ್ವಾಮಿ 18976 ಮತಗಳನ್ನು ಪಡೆದಿದ್ದಾರೆ.
ಹೊಸದುರ್ಗ 6ನೇ ಸುತ್ತಿನಲ್ಲಿ ಕಾಂಗ್ರೆಸ್ ಗೋವಿಂದಪ್ಪ 24578, ಬಿಜೆಪಿ ಎಸ್.ಲಿಂಗಮೂರ್ತಿ 18582 ಮತಗಳನ್ನು ಪಡೆದಿದ್ದಾರೆ.
5ನೇ ಸುತ್ತಿನಲ್ಲಿ ಹಿರಿಯೂರು ಬಿಜೆಪಿ ಅಭ್ಯರ್ಥಿ ಪೂರ್ಣಿಮಾ 13208 ಮತಗಳನ್ನ ಪಡೆದರೆ, ಜೆಡಿಎಸ್ ರವೀಂದ್ರಪ್ಪ 13106 ಮತಗಳು, ಕಾಂಗ್ರೆಸ್ ಅಭ್ಯರ್ಥಿ ಡಿ ಸುಧಾಕರ್ 21082 ಮತಗಳನ್ನು ಮುನ್ನಡೆ ಕಾಯ್ದುಕೊಂಡಿದೆ.